ಬಂಟ್ವಾಳ: ಮಾಣಿ ಗ್ರಾಮದ ಬಹು ಬೇಡಿಕೆಯ ಪೋಲೀಸ್ ಔಟ್ ಪೋಸ್ಟ್ ನಿರ್ಮಾಣದ ಬಗ್ಗೆ ಇವತ್ತೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಳ್ಳ ಕಾಕರ ಭೀತಿಯಿಂದ ಆತಂಕಿತರಾದ ಮಾಣಿಯ ಸಾರ್ವಜನಿಕರಿಗೆ ವಿಟ್ಲ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ್ ರೆಡ್ಡಿ ಅವರು ಭರವಸೆ ನೀಡಿದ್ದಾರೆ.

ಮಾಣಿಯಲ್ಲಿ ಪೋಲೀಸ್ ಔಟ್ ಪೋಸ್ಟ್ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರ ಪರವಾಗಿ ಬಂದ ಮನವಿಗೆ ಅವರು ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಲಾಕ್ ಡೌನ್ ಜಾರಿಯಲ್ಲಿರುವ ಈ ಕಠಿಣ ಸಮಯದಲ್ಲಿ ಕೂಡ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕಾಪಿಕಾಡು ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಅನುಮಾನಾಸ್ಪದವಾಗಿ ಅಕ್ಟಿವಾ ಸ್ಕೂಟರ್ ನಲ್ಲಿ ತಿರುಗಾಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಬಗ್ಗೆ ಸಾರ್ವಜನಿಕರು ದೂರಿದ್ದರು. ಇದಕ್ಕೆ ಸ್ಪಂದಿಸಿ ತಕ್ಷಣವೇ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿದ್ದರು.
ಜನರ ದೂರು ದುಮ್ಮಾನಗಳಿಗೆ ಶೀಘ್ರವಾಗಿ ಸ್ಪಂದಿಸುವ ವಿಟ್ಲ ಪೋಲೀಸ್ ಠಾಣಾಧಿಕಾರಿ ವಿನೋದ್ ರೆಡ್ಡಿಯವರ ಕಾರ್ಯ ವೈಖರಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
