ಲೊರೆಟ್ಟೊ ಮಾತಾ ಚರ್ಚ್ ನಲ್ಲಿ 18 ಮಕ್ಕಳಿಗೆ ಪರಮ ಪ್ರಸಾದ ನೀಡಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ ರವರು ಪ್ರಧಾನ ಧರ್ಮಗುರುಗಳಾಗಿ ಪವಿತ್ರ ಬಲಿ ಪೂಜೆಯನ್ನು ನೂರಾರು ಭಕ್ತಾದಿಗಳೊಂದಿಗೆ ಅರ್ಪಿಸಿ, ಮಕ್ಕಳಿಗೆ ಅವರ ತಂದೆ, ತಾಯಿಯವರೊಂದಿಗೆ ಪರಮ ಪ್ರಸಾದ ನೀಡಿದರು ಆಶಿರ್ವಚಿಸಿದರು. ಲೊರೆಟ್ಟೊ ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಸ್ವಾಮಿ ಜೇಸನ್ ಮೊನಿಸ್ ರವರು ದೇವರ ವಾಕ್ಯದ ಮೇಲೆ ಪ್ರವಚನ ನೀಡಿದರು. ಭಗಿನಿ ಇಡೊಲಿನ್, ಭಗಿನಿ ಅಗ್ನೆಸ್, ಭಗಿನಿ ಹೆಲೆನ್ ಮಕ್ಕಳಿಗೆ ತರಬೇತಿ ನೀಡಿದರು. ಚರ್ಚ್ ಪಾಲನಾ ಮಂಡಳಿ ವತಿಯಿಂದ ಮಕ್ಕಳನ್ನು ಸನ್ಮಾನಿಸಲಾಯಿತು.


