ಬಂಟ್ವಾಳ : ಲೊರೆಟ್ಟೊ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಲೊರೆಟ್ಟೊ ವಿದ್ಯಾಸಂಸ್ಥೆಯ ಸಂಚಾಲಕರಾದ ವಂ. ಸ್ವಾಮಿ ಫ್ರಾನ್ಸಿಸ್ ಕ್ರಾಸ್ತ, ಲೊರೆಟ್ಟೊ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ವಂ. ಸ್ವಾಮಿ ಜೆಸನ್ ವಿಜಯ್ ಮೋನಿಸ್ ಮತ್ತು ಕನ್ನಡ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಭ| ಇಡೋಲಿನ್ ರೋಡ್ರಿಗಸ್ ಹಾಗೂ ಉಭಯ ಶಾಲೆಯ ಶಿಕ್ಷ-ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು. ಕನ್ನಡ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಭ| ಇಡೋಲಿನ್ ರೋಡ್ರಿಗಸ್ ಸ್ವಾಗತಿಸಿದರು. ಧನ್ಯವಾದ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಕನ್ನಡ ಮಾದ್ಯಮ ಶಾಲಾ ಶಿಕ್ಷಕಿ ಮರಿನಾ ತಾವ್ರೊ ನಿರ್ವಹಿಸಿದರು. ಶಾಲಾ ಸಂಚಾಲಕರು ಗಾಂಧಿಜಿಯವರ ಆದರ್ಶ, ರಾಜಕೀಯ, ಸತ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಂಡ ಬಗ್ಗೆ ಸವಿವರವಾಗಿ ತಿಳಿಸಿದರು.


