ಲಂಚ ಸ್ವೀಕಾರ, ಆರೋಪ ಸಾಭೀತು, ಇಬ್ಬರು ಆರೋಪಿಗಳಾದ ಗ್ರಾಮ ಕರಣಿಕ ಮತ್ತು ಖಾಸಗಿ ವ್ಯಕ್ತಿಗೆ ಶಿಕ್ಷೆ
ಬಂಟ್ವಾಳ: ಜಮೀನಿನ ಖಾತಾ ಬದಲಾವಣೆ ಮಾಡಲು ಸುನೀತಾ ಡಿ’ಸೋಜ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟು, ದಿನಾಂಕ 31-10-2011 ರಂದು ರೂ. 3,000/- ಲಂಚ ಪಡೆದ ಆರೋಪ. ಬಂಟ್ವಾಳ ತಾಲೂಕು ನಾವೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಕರಣಿಕ ಆಗಿದ್ದ ಎನ್ ಹೊನ್ನಪ್ಪ ಮತ್ತು ಖಾಸಗಿ ವ್ಯಕ್ತಿ ವಿಕ್ಟರ್ ಪಿಂಟೋ ಎಂಬವರಿಗೆ ಮಂಗಳೂರು ಲೋಕಾಯುಕ್ತ ಕೋರ್ಟ್ ನಲ್ಲಿ ಶಿಕ್ಷೆ. 2011 ರಲ್ಲಿ ರೂ. 3,000/- ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಆರೋಪಿ ಎನ್ ಹೊನ್ನಪ್ಪ (33 ವರ್ಷ) ಮತ್ತು ಲಂಚ ಪಡೆಯಲು ಸಹಕರಿಸಿದ ಖಾಸಗಿ ವ್ಯಕ್ತಿ ಆರೋಪಿ ವಿಕ್ಟರ್ ಪಿಂಟೋ (75 ವರ್ಷ). ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರಿಂದ ಶಿಕ್ಷೆ ಪ್ರಕಟ.
ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಗ್ರಾಮ ಕರಣಿಕ ಎನ್ ಹೊನ್ನಪ್ಪನಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ ಎನ್ ಹೊನ್ನಪ್ಪನಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಆರೋಪಿ ವಿಕ್ಟರ್ ಪಿಂಟೋ ಖಾಸಗಿ ವ್ಯಕ್ತಿಯಾಗಿದ್ದು ಪ್ರಸ್ತುತ 76 ವರ್ಷದವರಾಗಿದ್ದು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಸದ್ರಿ ಆರೋಪಿಗೆ ಕಲಂ 8 ರಡಿಯಲ್ಲಿ ಎಸಗಿದ ಅಪರಾದಕ್ಕೆ 9 ದಿನಗಳ ಸಾದಾ ಸಜೆ ಮತ್ತು ರೂ. 5,000/- ದಂಡ. ಎರಡೂ ಆರೋಪಿಗಳು ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ಉದಯ ಎಮ್. ನಾಯಕ್ ಅವರ ನೇತೃತ್ವದದಲ್ಲಿ ಆರೋಪಿಗಳನ್ನು ಬಂದಿಸಲಾಗಿತ್ತು. ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.

