Friday, January 30, 2026

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಶೇ50.60ರಷ್ಟು ಮತದಾನ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ( 205) ವ್ಯಾಪ್ತಿಯಲ್ಲಿ ಮಧ್ಯಾಹ್ನ 1.30 ವೇಳೆಯ ವರೆಗೆ ಶೇ50.60ರಷ್ಟು ಮತದಾನ ವಾಗಿದೆ.
ಬೆಳಿಗ್ಗೆ ತಾಲೂಕಿನ ಕೆಲವಡೆ ಇವಿಎಂ. ದೋಷ ಹೊರತುಪಡಿಸಿದರೆ ಬಹುತೇಕ ಶಾಂತಿಯುತ ವಾಗಿ ಮತದಾನ ನಡೆದಿದೆ.
ಬೆಳ್ಳಿಗ್ಗೆ 7 ರಿಂದ 11 ಗಂಟೆಯವರೆಗೆ ಬಹಳ ಉತ್ಸಾಹದಿಂದ ಮತಚಲಾಯಿಸುವ ದೃಶ್ಯ ಕಂಡುಬಂದರೆ ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗಳು ಮತದಾರರಿಲ್ಲದೆ ಬಿಕೋ ಎನ್ನುತ್ತಿದ್ದವು.
ಇಂದು ಹಲವು ಕಡೆಗಳಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳು ಇದ್ದ ಕಾರಣ ಸಂಜೆಯ ವೇಳೆಗೆ ಪೂರ್ಣ ಮತದಾನವಾಗುವ ನಿರೀಕ್ಷೆ ಇದೆ.
ಪುತ್ತೂರು ಮಧ್ಯಾಹ್ನದ ವೇಳೆ 56.6 ಶೇ ಮತದಾನ ನಡೆದಿದೆ. ಬೆಳ್ತಂಗಡಿಯಲ್ಲಿ 50.74 ಶೇ. ಮತದಾನ, ಮಂಗಳೂರು 45.09 ಶೇ, ದಕ್ಷಿಣ 43.34 ಮಂಗಳೂರು ಉತ್ತರ 47.74 ಮೂಡಬಿದ್ರೆ ಕ್ಷೇತ್ರದಲ್ಲಿ 48.55 ಸುಳ್ಯ ಕ್ಷೇತ್ರದಲ್ಲಿ 53.13 ಮತದಾನ ನಡೆದದರೆ ಸರಾಸರಿಯಾಗಿ 48.85 ಶೇ ಮತದಾನವಾಗಿದೆ.

More from the blog

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...