ಬಂಟ್ವಾಳ: ಕೊರೊನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅದೇಶದ ಜನತಾಕರ್ಪ್ಯೂ ಗೆ ವಾರ ತುಂಬಿತು.
ಪ್ರಧಾನಿಯವರ ಆದೇಶ ಪಾಲಿಸಿ ಮನೆಯಲ್ಲಿ ಕುಳಿತವರೂ ಸರಿಯಾಗಿ ಒಂದು ವಾರ ಕಳೆದಂತೆ ಅಯಿತು. ದಿನಕಳೆದಂತೆ ಜನತಾ ಕರ್ಪ್ಯೂ ಬಹಳ ಕಠಿಣವಾಗುತ್ತಾ ಇದೆ. ಕೆಲವು ಕಡೆಗಳಲ್ಲಿ ಜನತಾಕರ್ಪ್ಯೂ ಗೆ ಜನರ ಬೆಂಬಲ ಸಿಗದ ಕಾರಣದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಕಳೆದ ಎರಡು ದಿನಗಳಿಂದ ಜಲ್ಲೆಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅದರೂ ಬೆಳಿಗ್ಗೆ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಜನ ತುಂಬಿದ ದೃಶ್ಯ ಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಜನ ಸ್ವಯಂ ಜಾಗೃತ ರಾಗುವವರೆಗೆ ಕೊರೊನ ಹಿಮ್ಮೆಟ್ಟಿಸಲು ಅಸಾಧ್ಯ.
ಪ್ರಧಾನಿ ಅದೇಶದ 21 ದಿನಗಳ ಕಾಲ ಮನೆಯಿಂದ ಹೊರಬರದೆ ಇದ್ದರೆ ಅದಷ್ಟು ಬೇಗ ಈ ಜಿಲ್ಲೆ ಕೊರೊನ ದಿಂದ ಮುಕ್ತಿಯಾಗಬಹುದು ಇಲ್ಲದೆ ಜನ ಮನೆಯಿಂದ ಹೊರಬರುತ್ತಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪೇಟೆಯಲ್ಲಿ ತಿರುಗಾಟ ನಡೆಸಿದರೆ ಮತ್ತೆ ಈ ಜಿಲ್ಲೆಯ ಜನ ಇಲ್ಲದ ಕಷ್ಟ ಅನುಭವಿಸಬೇಕಾಗುತ್ತದೆ.














