Saturday, January 31, 2026

ಲಾಕ್ ಡೌನ್ ರಾಜ್ಯ ಮಾರ್ಗಸೂಚಿ ಅನುಸರಿಸಿಃ ರಮಾನಾಥ ರೈ ಸಲಹೆ

ಬಂಟ್ವಾಳ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ರಾಜ್ಯ ಸರಕಾರದ ಮಾರ್ಗಸೂಚಿಯನ್ನು ಜಾರಿ ಮಾಡಬೇಕೆ ಹೊರತು ಪ್ರತ್ಯೇಕ ನಿಯಮಗಳನ್ನು ತಂದು ಜನರನ್ನು ಗೊಂದಲಕ್ಕೆ ದೂಡಬೇಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾಡಳಿತಕ್ಕೆ ಸಲಹೆ ಮಾಡಿದ್ದಾರೆ.

ಕೊರೋನಾ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಜನರು ಈಗಾಗಲೇ ಮಾನಸಿಕ ತುಮುಲದಲ್ಲಿ ಇದ್ದಾರೆ. ನಮ್ಮ ಜಿಲ್ಲೆಗೆ ಪ್ರತ್ಯೇಕ ನಿಯಮಗಳನ್ನು ಮಾಡುವುದರಿಂದ ಜನರಿಗೆ ಇನ್ನಷ್ಟು ತೊಂದರೆ ಆಗುತ್ತದೆ. ಖರೀದಿಗೆ ಕಡಿಮೆ ಸಮಯ ನೀಡಿದರೆ ಮಾರ್ಕೆಟ್, ಅಂಗಡಿಗಳಲ್ಲಿ ಜನಜಂಗುಲಿ ಸೇರುವುದು ಒಳ್ಳೆಯದಲ್ಲ ಎಂದು ಮಾಜಿ ಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಮುನ್ನ ಮೂರು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರಕಾರ ನೀಡಿರುವ ಮಾರ್ಗಸೂಚಿಯನ್ನು ಯಥಾವತ್ ಜಾರಿ ಮಾಡಿ. ಮೀನು ಮಾರಾಟಗಾರರಿಗೆ ಕೋವಿಡ್ ನಿಯಂತ್ರಣ ಸೂತ್ರಗಳನ್ನು ಅನುಸರಿಸಿ ಮಾರಾಟ ಮಾಡಲು ಅವಕಾಶ ನೀಡಿ ಎಂದು ಮಾಜಿ ಸಚಿವ ರಮಾನಾಥ ರೈ ಸೂಚಿಸಿದ್ದಾರೆ.

ಕೋವಿಡ್ 19 ವಿರುದ್ಧ ಹೋರಾಡುವಾಗ ಜಿಲ್ಲೆಯ ಮುಖಂಡರು, ತಜ್ಞರು, ಸೇವಾ ಸಂಸ್ಥೆಗಳನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಪ್ರಯತ್ನ ಮಾಡಿದಾಗ ಕೊರೋನಾ ಸೋಂಕನ್ನು ಸೋಲಿಸಲು ಸುಲಭ ಆಗಬಹುದು ಎಂದು ಮಾಜಿ ಸಚಿವರು ಜಿಲ್ಲಾಡಳಿತಕ್ಕೆ ಕಿವಿಮಾತು ಹೇಳಿದ್ದಾರೆ.

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...