Thursday, July 3, 2025

ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಟ: 20 ವಾಹನಗಳು ಪೋಲೀಸ್ ವಶಕ್ಕೆ

ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಅನಾವಶ್ಯಕ ತಿರುಗಾಟ ನಡೆಸಿದ ಹಿನ್ನೆಲೆಯಲ್ಲಿ ಸುಮಾರು 20 ವಾಹನಗಳನ್ನು ಬಂಟ್ವಾಳ ನಗರ ಠಾಣಾ ಎಸ್‌ಐ. ಅವಿನಾಶ್ ಹಾಗೂ ಗ್ರಾಮಾಂತರ ಎಸ್.ಐ. ಪ್ರಸನ್ನ ಅವರ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ ಬಿಡುಗಡೆ ಮಾಡಲಾಯಿತು.

ಬಿಸಿರೋಡು ಹಾಗೂ ಇತರ ಕಡೆಗಳಲ್ಲಿ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಎರಡು ಕಾರು ಹಾಗೂ 18 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ದಂಡ ಹಾಕಿದ್ದಾರೆ.

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ತ್ತಿದ್ದು ನಿಯಂತ್ರಣ ಕ್ಕಾಗಿ ಸರಕಾರ ಲಾಕ್ ಡೌನ್ ನಿಯಮ‌ ಜಾರಿ ಮಾಡಿದ್ದಾರೆ.

ಆದರೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ಬಗ್ಗೆ ಪೋಲೀಸರು ಗರಂ ಆಗಿದ್ದಲ್ಲದೆ ಅಂತವರ ವಾಹನಗಳ ಮೇಲೆ ದಂಡ ವಿಧಿಸಿದ್ದಾರೆ.

More from the blog

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಲೀಲಾ ಕೃಷ್ಣಪ್ಪ ಇವರ ಮಗನಾಧ ಹರೀಶ್ ಇವರು ಅನಾರೋಗ್ಯದಿಂದ ಬಳಲುತ್ತಿದ್ದು. ಇವರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್...