Thursday, January 29, 2026

ಲಾಕ್ ಡೌನ್ ನಿಂದ ರಿಲೀಫ್ ಪಡೆದ ಬಂಟ್ವಾಳ

ಬಂಟ್ವಾಳ: ಬಸ್ ಸಂಚಾರ ವ್ಯವಸ್ಥೆಯನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಹಿಂದಿನಂತೆ ನಡೆಯುವ ಚಿತ್ರಣಗಳು ಬಿಸಿರೋಡಿನಲ್ಲಿ ಇಂದು ಕಂಡು ಬಂದಿತು.
ವಾಹನಗಳ ಓಡಾಟದ ಸಂಖ್ಯೆಯೂ ವಿಪರೀತವಾಗಿತ್ತು. ವೈನ್ ಶಾಪ್ ಗಳ ಬಾಗಿಲಲ್ಲಿ ಜನರ ಕ್ಯೂ. ಜನರು ಜೈಲಿನಿಂದ ಬಿಡುಗಡೆಯಾದ ರೀತಿ ವರ್ತಿಸುತ್ತಿದ್ಧರು.

ಕಳೆದ ಒಂದುವರೆ ತಿಂಗಳಿನಿಂದ ಲಾಕ್ ಡೌನ್ ಗೆ ಒಳಗಾಗಿದ್ದ ಬಂಟ್ವಾಳ ತಾಲೂಕಿನ ಬಹುತೇಕ ಎಲ್ಲಾ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ಭರದಿಂದ ಸಾಗಿತು. ಜನ ಸಂಚಾರ ಮಾಡುವುದು ನೋಡಿದರೆ ಕೊರೊನಾದಿಂದ ನಾವು ಮುಕ್ತರಾದೆವು ಅನ್ನಿಸುತ್ತಿತ್ತು.

ಬಂಟ್ವಾಳ ಪೇಟೆಯಲ್ಲಿ ಮೂರು ಜೀವಗಳು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಉಳಿದಂತೆ ಇನ್ನೂ ಮೂರು ಪಾಸಿಟಿವ್ ಪ್ರಕರಣಗಳು ಇವೆ ಎಂಬುದು ಬಂಟ್ವಾಳದ ಜನತೆಯಲ್ಲಿರಲಿಲ್ಲ. ಬಂಟ್ವಾಳದಲ್ಲಿ ಏನೂ ಆಗಿಲ್ಲ ಅನ್ನುವ ರೀತಿ ಓಡಾಟಗಳು ನಡೆಯುತ್ತಿವೆ.
ಇಷ್ಟರವರೆಗಿನ ಅಧಿಕಾರಿಗಳ ಶ್ರಮಕ್ಕೆ ಇಂದು ಒಂದು ಹನಿ ನೀರು ಬಿಟ್ಟಂತಾಗಿದೆ.

More from the blog

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...

ಕೊಳ್ನಾಡು: ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಸಾವು

ವಿಟ್ಲ: ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಕೊಳ್ನಾಡು ಗ್ರಾಮದ ಸಾಲೆತ್ತೂರು ಕೋಡಿ ನಿವಾಸಿ ಕೃಷ್ಣಪ್ಪ ಪೂಜಾರಿ(70) ಮೃತ ಪಟ್ಟಿದ್ದಾರೆ. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ...

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...