ಬಂಟ್ವಾಳ : ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು. ಭಾರತದಲ್ಲಿ ಕೊರೋನಾ ಮಹಾಮಾರಿ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ. ಎಲ್ಲಾ ದೇಶವಾಸಿಗಳ ತಪಸ್ಸಿನಿಂದ ಕೊರೋನಾ ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಿಮ್ಮ ಕಷ್ಟ ವನ್ನು ಸಹಿಸಿಕೊಂಡು ದೇಶಕ್ಕಾಗಿ ಹೊರಡಿದ್ದಿರಿ.

ಕೆಲವರಿಗೆ ಊಟದ ಸಮಸ್ಯೆ ಯಾಗಿದೆ. ಕೆಲವರಿಗೆ ಓಡಾಟದ ಸಮಸ್ಯೆ ಯಾಗಿದೆ. ದೇಶದ ಪ್ರಜೆಗಳಿಗಾಗಿ ಯೋಧರಂತೆ ಹೋರಾಟ ನಡೆಸಿದ್ದೇವೆ.
ವಿದೇಶದಿಂದ ಬಂದವರಿಗೆ 14ದಿನ ಕ್ವಾರಂಟೈನ್ ಮಾಡಿದ್ದೆವೆ. ಭಾರತದಲ್ಲಿ 550 ಕೇಸ್ ಇದ್ದಾಗ ಲಾಕ್ ಡೌನ್ ಘೋಷಣೆ. ಭಾರತ ಸಮಗ್ರ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದೆ.
19 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಿದ ಪ್ರಧಾನಿ. ಮೇ. 3 ರ ವರೆಗೆ ದೇಶದಲ್ಲಿ ಲಾಕ್ ಡೌನ್ ಮುಂದುವರಿಕೆ. ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮೊದಲಿಗಿಂತ ಹೆಚ್ಚು ಕಟ್ಟೆಚ್ಚರ. ಹಾಟ್ ಸ್ಪಾಟ್ ಆಗಿ ಬದಲಾಗುವ ಪ್ರದೇಶಗಲ್ಲಿ ಕಠಿಣ ನಿಯಮ. ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ರೆ ಆ ಪ್ರದೇಶ ಸಂಪೂರ್ಣ ಬಂದ್. ಏ.20ರ ವರೆಗೆ ಕೋರನ ಬಗ್ಗೆ ಅವಲೋಕನ. ಏ. 20 ರಲ್ಲಿ ಕೊರೋನಾ ನಿಯಂತ್ರಣ ಕ್ಕೆ ಬಂದರೆ, ನಿಯಮ ಸಡಿಲಿಕೆ ಸಾಧ್ಯತೆ. ನಾಳೆ ಲಾಕ್ ಡೌನ್ ಪರಿಷ್ಕೃತ ಆದೇಶಗಳ ಕುರಿತು ವಿಸ್ತ್ರತ ಮಾರ್ಗಸೂಚಿ ಬಿಡುಗಡೆ. ಕೃಷಿ ಕಾರ್ಮಿಕರಿಗೆ ಹೊಸ ಮಾರ್ಗಸೂಚಿ ಅನ್ವಯ ವಿನಾಯಿತಿ.
ಕೊರೋನಾ ಪೀಡಿತರಿಗಾಗಿ ಆಸ್ಪತ್ರೆಗಳಲ್ಲಿ 1ಲಕ್ಷ ಬೆಡ್ ರೆಡಿ. ದಿನಗೂಲಿ ನೌಕರರಿಗೆ
ಕೊರೋನಾ ನಿಯಂತ್ರಣಕ್ಕೆ ಸಪ್ತ ಸೂತ್ರ ಕೊಟ್ಟ ಪ್ರಧಾನಿ ಮೋದಿ :
1.ಮನೆಯ ಹಿರಿಯರ ಬಗ್ಗೆ ಕಾಳಜಿ ವಹಿಸಿ.
2. ಸಾಮಾಜಿಕ ಅಂತರ, ಲಕ್ಷ್ಮಣರೇಖೆ ಪಾಲಿಸಿ.
3. ರೋಗ, ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾರ್ಗಸೂಚಿ ಪಾಲಿಸಿ.
4. ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ಲೋಡ್ ಮಾಡಿ.
5. ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡುವಂತೆ ಮನವಿ.
6. ಅರೋಗ್ಯ, ಶುಚಿತ್ವ ಕಾರ್ಯಕರ್ತ ರ ಬಗ್ಗೆ ಗಮನವಿರಲಿ.
7. ಕಾರ್ಮಿಕರನ್ನು ಕೆಲಸದಿಂದ ತೆಗಯಬೇಡಿ ಭಾರತ ಸಮಗ್ರ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದೆ.

