Thursday, June 26, 2025

ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

ನ್ಯೂಯಾರ್ಕ್: ಇಷ್ಟು ದಿನ ಮನುಷ್ಯರಲ್ಲಿ ಮಾತ್ರ ಕೊರೊನಾ ಸೋಂಕು ಹರಡುತ್ತಿರುವುದು ಸುದ್ದಿಯಾಗಿತ್ತು. ಆದ್ರೀಗ ಪ್ರಾಣಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಭಯ ಹುಟ್ಟಿಸುವ ವಿಚಾರ.

ಮನುಷ್ಯನಿಂದ ಮನುಷ್ಯನಿಗೆ ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಪ್ರಾಣಿಗಳಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದೆ. ಈಗ ಪ್ರಾಣಿಗಳಿಂದ ಈ ಸೋಂಕು ಮತ್ತಷ್ಟು ಉಲ್ಬಣವಾಗುತ್ತಾ ಎಂಬ ಆತಂಕ ಹುಟ್ಟಿಕೊಂಡಿದೆ.

ಹೌದು, ನ್ಯೂಯಾರ್ಕ್‌ನ ಬ್ರಾಂಕ್ಸ್ ಝೂನಲ್ಲಿ ಹುಲಿಗೆ ಕೊರೊನಾ ಸೋಂಕು ದೃಢವಾಗಿದೆ. ಇದುವರೆಗೂ ಪ್ರಾಣಿಗಳಲ್ಲಿ ಸೋಂಕು ಇರಬಹುದು ಎನ್ನಲಾಗಿತ್ತೆ ಹೊರತು, ಸೋಂಕು ದೃಢವಾಗಿರುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಇದೀಗ, ಈ ಹುಲಿ ಪ್ರಕರಣ ಜಗತ್ತಿಗೆ ಪ್ರಶ್ನೆಯಾಗಿದೆ.
ನ್ಯೂಯಾರ್ಕ್‌ ನಗರದಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ನಾಡಿಯಾ ಎಂಬ ಹೆಸರಿನ ಮಲಯನ್ ಹುಲಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಯುಎಸ್‌ ಕೃಷಿ ಇಲಾಖೆ ಭಾನುವಾರ ಮಧ್ಯಾಹ್ನ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಆರು ಬೆಕ್ಕುಗಳಲ್ಲಿಯೂ ರೋಗದ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.ಕೊರೊನಾ ಪ್ರಾಣಿಗಳಿಗೆ ಬರಲ್ಲ ಎಂದು ಹಲವು ಹೇಳುತ್ತಿದ್ದರು. ಆದರೆ, ಮನುಷ್ಯನಿಂದಲೇ ಹುಲಿಗೆ ಸೋಂಕು ಬಂದಿದೆ ಎಂದು ಬ್ರಾಂಕ್ಸ್ ಮೃಗಾಲಯದ ಮುಖ್ಯಸ್ಥ ಪೌಲ್ ಕ್ಯಾಲೆ ಹೇಳಿದ್ದಾರೆ. ”ನನ್ನ ಜ್ಞಾನದ ಪ್ರಕಾರ ಪ್ರಾಣಿಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಇದೇ ಮೊದಲು” ಎಂದಿದ್ದಾರೆ. ಇನ್ನು ಮಾರ್ಚ್ 16 ರಿಂದಲೇ ಝೂ ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್‌ ಆರಂಭದಲ್ಲಿ ಹುಲಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಅನುಮಾನದಿಂದ ಪರೀಕ್ಷಿಸಿದಾಗ ಏಪ್ರಿಲ್ 2 ರಂದು ಹುಲಿಗೆ ಕೊವಿಡ್ ಸೋಂಕು ಇರುವುದು ಖಚಿತವಾಗಿದೆ. ಝೂ ಮುಖ್ಯಸ್ಥನ ಪ್ರಕಾರ ಹುಲಿಯ ಜೊತೆಯಲ್ಲಿ ಮತ್ತೆರಡು ಹುಲಿ ಮತ್ತು ಮೂರು ಸಿಂಹಗಳಿಗೆ ಹಾಗೂ ಆರು ಬೆಕ್ಕಿನಲ್ಲೂ ಕೆಮ್ಮು ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಚೀನಾದ ಅಧ್ಯಯನ ಒಂದರ ಪ್ರಕಾರ ಬೆಕ್ಕುಗಳು ಪರಸ್ಪರ ಕೊರೊನಾ ಸೋಂಕಿಗೆ ತುತ್ತಾಗಬಹುದು ಎಂದು ಹೇಳಿದ್ದರು. ಈ ಹಿಂದೆ ಬಂದಿದ್ದ SARS-CoV-2 ವೈರಸ್‌ ಪ್ರಾಣಿಯಲ್ಲಿ ಕಾಣಿಸಿಕೊಂಡಿತ್ತು. ಇನ್ನು ಹಾಂಕಾಂಗ್‌ನಲ್ಲಿ ಬೆಕ್ಕಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಾಕಿರುವ ಬೆಕ್ಕಿನಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಸರ್ಕಾರದ ಕಡೆಯಿಂದಲೇ ಅಧಿಕೃತ ಮಾಹಿತಿ ನೀಡಲಾಗಿತ್ತು.
ಮುಂದೆ ಏನು ಎಂಬ ಪ್ರಶ್ನೆಗೆ ಉತ್ತರಿಸಿ ಝೂ ಮುಖ್ಯಸ್ಥ ಕ್ಯಾಲೆ ”ಇದು ನಿಜಕ್ಕೂ ಹೊಸ ಅನುಭವ. ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಝೂನಲ್ಲಿ ಹುಲಿ ಜೊತೆ ಸಿಂಹ, ಚಿರತೆ ಬೆಕ್ಕುಗಳಿವೆ. ಅದರಲ್ಲಿ ಕೆಲವು ಪ್ರಾಣಿಗಳಲ್ಲಿ ರೋಗ ಲಕ್ಷಣವೂ ಇದೆ. ಎಕ್ಸ್‌ಪರ್ಟ್ಸ್‌ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ” ಎಂದಿದ್ದಾರೆ.

More from the blog

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...