ಬಂಟ್ವಾಳ: ಓದು ಪ್ರತಿಯೊಬ್ಬರಿಗೂ ಸ್ವಂತಿಕೆಯನ್ನು ಬೆಳೆಸಿಕೊಳ್ಳಲು ಸಾಧ್ಯ. ಗ್ರಂಥಾಲಯ ನೆಮ್ಮದಿ ನೀಡುವ ಮತ್ತು ಮನಸ್ಸು ಕೇಂದ್ರೀಕೃತ ಗೊಳ್ಳುವ ದೇವಾಲಯ ವಿದ್ದಂತೆ
ಓದುವ ಹವ್ಯಾಸ ವನ್ನು ಸ್ವತಃ ಮಕ್ಕಳು ಮಾಡಿಕೊಳ್ಳಬೇಕಾಗಿದೆ.
ಒದುವ ಮಹತ್ವವನ್ನು ನೆನಪಿಸುವ ಕೆಲಸ ಮಾತ್ರ ಇಂತಹ ಕಾರ್ಯಕ್ರಮ ಗಳ ಮೂಲಕ ಮಾಡಲಾಗುತ್ತಿದೆ.
ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಾ ಬರುತ್ತಿರುವುದು ಉತ್ತಮ ಲಕ್ಷಣ ವಲ್ಲ ಎಂದು ಬಿಸಿರೋಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಅವರು ಹೇಳಿದರು.
ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಹಾಗೂ ಬಂಟ್ವಾಳ ಶಾಖೆಯ ವತಿಯಿಂದ ಬಿಸಿರೋಡಿನ ಗ್ರಂಥಾಲಯ ದಲ್ಲಿ ನಡೆದ “ಓದುವ ತಿಂಗಳು” ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಒದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನ ವೃದ್ದಿಯಾಗುತ್ತದೆ, ಪಾಠದ ಜೊತೆಯಲ್ಲಿ ಗ್ರಂಥಾಲಯ ಕ್ಕೆ ಹೋಗುವ ಅಭ್ಯಾಸ ಮಾಡಿಕೊಳ್ಳಲು ತಿಳಿಸಿದರು.

ಸಾಮಾಜಿಕ ಜಾಲತಾಣದಿಂದ ಹಿಂದೆ ಸರಿದು ಓದುವುದು ಬರೆಯುವುದು ಬೆಳೆಸಿಕೊಳ್ಳಿ ಎಂದ ರು.
ಜಯಂತಿ ಗಂಗಾಧರ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಿಂದ ಲೇ ಓದುವ ಮನಸ್ಸು ಮಾಡಿದಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಅವರು ಹೇಳಿದರು.
ಕಥೆಕವನಗಳು ಮನಸ್ಸು ಶುದ್ದಿ ಮಾಡುತ್ತದೆ, ಸಾಯುವ ತನಕ ಓದು ನಮ್ಮ ಸ್ನೇಹಿತ ನಾಗಿರಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ದ ಗ್ರಂಥಾಲಲಾಯಧಿಕಾರಿ ಮಮತಾ ರೈ, ಜಿಲ್ಲಾ ಕೇಂದ್ರ ಗ್ರಂಥಾಲಯ ದ ಗ್ರಂಥ ಪಾಲಕಿ ಗಾಯತ್ರಿ, ಓದುಗರಾದ ಜೆರೊಮ್ ರೋಡ್ರಿಗಸ್,
ಗ್ರಂಥಾಲಯ ಸಿಬ್ಬಂದಿ ಸುಜಾತ ಹಾಗೂ ಯಶವಂತಿ ಉಪಸ್ಥಿತರಿದ್ದರು.
ಶಾಖಾ ಗ್ರಂಥ ಪಾಲಕಿ ಪ್ರಣಿತಪ್ರಿಯಾ ಮೊಂತೆರೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶಾಖಾ ಗ್ರಂಥ ಪಾಲಕರಾದ ನಮಿತ ವಂದಿಸಿದರು.