ಬೆಂಗಳೂರು: ಸುಡು ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡಬೇಕಿದ್ದ ನಿಂಬೆ ಹಣ್ಣು ಇದೀಗ ಬಲು ದುಬಾರಿ ಆಗಿದೆ.

ಬಿಸಿಲಿನ ಝಳಕ್ಕೆ ಹೈರಾಣಾದ ಜನತೆ ನಿಂಬೆ ಶರಬತ್ತಿನ ಮೊರೆ ಹೋಗಿದ್ದು, ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ನಿಂಬೆ ಹಣ್ಣು ಪ್ರಸ್ತುತ 10 ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಸಾಮಾನ್ಯ ಗಾತ್ರದ ಹಣ್ಣಿಗೆ 10 ರೂ., ಸಣ್ಣ ಹಣ್ಣಿಗೆ 5 ರಿಂದ 7 ಹಾಗೂ ದೊಡ್ಡ ಗಾತ್ರದ ಹಣ್ಣು 12ರಿಂದ 15 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಶರಬತ್ತಿನ ಬೆಲೆಯೂ ಹೆಚ್ಚಳವಾಗಿದೆ.