Thursday, February 13, 2025

ಫೆ.11 ರಂದು ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ

ಬಂಟ್ವಾಳ: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷರಾದ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷರಾದ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಫೆಬ್ರವರಿ 11ರಂದು ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಲಯನ್ ರಮಾನಂದ ‌ನೂಜಿಪ್ಪಾಡಿ ಅವರು ತಿಳಿಸಿದ್ದಾರೆ.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಾಂತ್ಯ 5ರ ಕ್ಲಬ್‌ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ, ಮಂಗಳಗಂಗೋತ್ರಿ, ಚೋಟಮಂಗಳೂರು, ಲೊರೆಟ್ಟೋ ಅಗ್ರಾರ್, ಮುಡಿಪು ಕುರ್ನಾಡು, ವಾಮದಪದವು ಪ್ರಕೃತಿ, ವಿಟ್ಲ ಸಿಟಿ, ರಾಯಿ ಸಿದ್ಧಕಟ್ಟೆ ಹಾಗೂ ಅಮ್ಮೂರು ಒಳಗೊಂಡಂತೆ ಈ 10 ಕ್ಲಬ್‌ಗಳ ಪ್ರಾಂತೀಯ ಸಮ್ಮಿಲನವು ಸೇವಾ ಸಾರ್ಥಕ್ಯದ ಹೊಂಗಿರಣ ಶೀರ್ಷಿಕೆಯೊಂದಿಗೆ ವಿಶೇಷವಾಗಿ ಮಂಚಿ, ಇರಾ, ಕೊಲ್ನಾಡು ಗ್ರಾಮದ ಸರಕಾರಿ ಶಾಲೆಗಳ ವಿಶೇಷ ಅಗತ್ಯಕ್ಕೆನೆರವಿನ ಸೇವಾ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ .ಮಾತನಾಡಿ, ಈ ಸಮಾರಂಭದಲ್ಲಿ ಐವರು ಸಾಧಕರಾದ ಸೇವೆಯ ಮೂಲಕ ಗುರುತಿಸಿಕೊಂಡಿರುವ ಸೂರ್ಯನಾರಾಯಣ ರಾವ್ ಪತ್ತುಮುಡಿಯವರಿಗೆ ‘ಲಯನ್ಸ್ ಉದ್ಯಮ ಭೂಷಣ ಪ್ರಶಸ್ತಿ’, ಸುಲೈಮಾನ್ ಹಾಜಿಯವರಿಗೆ ‘ಲಯನ್ಸ್ ಉದ್ಯಮ ಸೌರಭ ಪ್ರಶಸ್ತಿ’, ಸತೀಶ್ ಕುಮಾರ್ ಆಳ್ವರವರಿಗೆ ‘ಲಯನ್ಸ್ ಉದ್ಯಮ ತಿಲಕ ಪ್ರಶಸ್ತಿ’, ಸುಧಾಕರ ಆಚಾರ್ಯರಿಗೆ ‘ಲಯನ್ಸ್ ಉದ್ಯಮ ರತ್ನ ಪ್ರಶಸ್ತಿ’, ಉಮಾನಾಥ ರೈ ಮೇರಾವು ಇವರಿಗೆ ‘ಲಯನ್ಸ್ ಶಿಕ್ಷಣಭೂಷಣ ಪ್ರಶಸ್ತಿ’ ಎಂಬ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಪ್ರಾಂತೀಯ ಸಮ್ಮಿಲನವು ಸೇವೆ ಸಾಂಗತ್ಯದ ಮೂಲಕವೂ, ವಿಶೇಷವಾಗಿ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ಹಾಗೂ ಎಕ್ಸಿಮ್ ಡ್ಯಾನ್ಸ್ ಕ್ರೂ ಬಿ.ಸಿ.ರೋಡು ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರಕಾರಗಳು ಕೂಡಾ ವೇದಿಕೆಯಲ್ಲಿ ನಡೆಯಲಿದೆ ಎಂದರು.

‌ಈ ಕಾರ್ಯಕ್ರಮದಲ್ಲಿ ಶೇ.90 ರಷ್ಟು ಪ್ಲಾಸ್ಟಿಕ್ ಮುಕ್ತವಾದ ಕಾರ್ಯಕ್ರಮವಾಗಬೇಕು ಎಂಬ ಯೋಜನೆ ಸಿದ್ದಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮ್ ಪ್ರಸಾದ್ ರೈ, ಜಯಪ್ರಕಾಶ್ ರೈ ಮೇರಾವು, ಬಾಲಕೃಷ್ಣ ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...