ಬಂಟ್ವಾಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ,ಶಿವಮೊಗ್ಗ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ಸಂಜೆ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆಯಿತು.


ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ದುಡಿದ ಹಿರಿಯರನ್ನು ಸನ್ಮಾನಿಸಿರುವುದು ಅಭಿನಂದನೀಯವಾಗಿದೆ ಎಂದರು. ಸರಕಾರದ ಯೋಜನೆ,ಕಾರ್ಯಕ್ರಮವನ್ನು ಜನ ಸಮುದಾಯಕ್ಕೆ ತಲುಪಿಸುವ ಮಾಧ್ಯಮಗಳ ಕಾರ್ಯ ಅಭಿನಂದನೀಯವಾಗಿದೆ. ಪತ್ರಕರ್ತರು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದರು. ಸರಕಾರ ಪತ್ರಕರ್ತರಿಗೆ ಹಲವು ಕಲ್ಯಾಣ ಕಾರ್ಯಮಾಡಿರುವುದು ತೃಪ್ತಿ ತಂದಿದ್ದು,ಮುಂದಿನ ದಿನದಲ್ಲು ಪತ್ರಕರ್ತರಿ ಹೆಚ್ಚಿನ ಅನುಕೂಲ ಮಾಡಿಕೊಡಲು ಸಿದ್ದ ಎಂದು ಭರವಸೆಯಿತ್ತರು. ರಾಜ್ಯ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನಗೈದು ಮಾತನಾಡಿ, ಸಂವಹನ ಮಾನವ ಜೀವನದಲ್ಲಿ ಅವಶ್ಯಕತೆ ಇದೆ.ದೃಶ್ಯ ಮಾಧ್ಯಮ ಮೇಲಾಟದಲ್ಲಿ ಮುದ್ರಣಮಾಧ್ಯಮ ಸದೃಡತೆಯನ್ನು ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಪತ್ರಕರ್ತರ ಶ್ರಮ ,ತ್ಯಾಗ ಅಭೂತಪೂರ್ವವಾದುದು ಎಂದರು. ಸರಕಾರ ಮತ್ತು ಜನರ ನಡುವೆ ಸಂಪರ್ಕ ಕೊಂಡಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುವಂತಾಗಬೇಕು ಎಂದರು. “.ಸಿಹಿಮುಗ್ಗಿ ” ಸ್ಮರಣ ಸಂಚಿಕೆಯನ್ನು ಸಂಸದ ನಿ.ವೈ ರಾಘವೇಂದ್ರ ಬಿಡುಗಡೆಗೊಳಿಸಿದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ವಿ.ಪ.ಸದಸ್ಯ ಆಯನೂರು ಮಂಜುನಾಥ್,ಪ್ರಸನ್ನಕುಮಾರ್, ಸಂಘದ ರಾಷ್ಟ್ರೀಯ ಪ್ರತಿನಿಧಿ ಬಿ.ವಿ. ಮಲ್ಲಿಕಾರ್ಜುನಯ್ಯ,ರಾಜ್ಯ ಅಕಾಡಮಿ ಸದಸ್ಯ ಗೋಪಾಲಯ್ಯ,ಜೆಡಿಎಸ್ ಮುಖಂಡ ಶ್ರೀಕಾಂತ್ ಸಹಿತ ಹಲವಾರ ಗಣ್ಯರು ವೇದಿಕೆಯಲ್ಲಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಸ್ತಾವನೆಗೈದರು.93 ಇತಿಹಾಸವಿರುವ ಕಾರ್ಯನಿರತ ಪತ್ರಕರ್ತರ ಸಂಘ 10 ಸಾವಿರಕ್ಕು ಅಧಿಕ ಸದಸ್ಯರನ್ನು ಹೊಂದಿರುವ ಹೆಗ್ಗಳಿಕೆಯನ್ನು ಇದೆ.ಕೋವಿಡ್ ನಿಂದಾಗಿ ಮೃತ 44 ಪತ್ರಕರ್ತರ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡುವ ಮೂಲಕ ಬಿಎಸ್ ವೈ ಅವರ ಸ್ಪಂದನೆ ಅಭಿನಂದನೀಯವಾಗಿದೆ ಎಂದರು. ಕಲ್ಬುರ್ಗಿಯಲ್ಲಿ ಮುಂದಿನ ತಿಂಗಳು ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದೆ ಎಂದರು. ಸುವರ್ಣ ಏಷ್ಯಾನೆಟ್ ನ್ಯೂಸ್ ನ ರವಿ ಹೆಗಡೆ, ಬಿ.ಎಂ.ಹನೀಪ್ ಸೇರಿದಂತೆ 18 ಮಂದಿಗೆ ರಾಜ್ಯ ಮಟ್ಟದ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಕರ್ತರ ರಾಜ್ಯ ಅಕಾಡಮಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಬಂಟ್ವಾಳ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ,ಖಜಾಂಚಿ ವೆಂಕಟೇಶ್ ಬಂಟ್ವಾಳ,ಸದಸ್ಯರಾದ ಕಿಶೋರ್ ಪೆರಾಜೆ,ವಿಷ್ಣುಗುಪ್ತ ಪುಣಚ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

