Tuesday, July 8, 2025

ಕುವೈಟ್ ಕನ್ನಡ ಕೂಟ 2020ರಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಮುಂಬಯಿ: ಕಳೆದ 35 ವರ್ಷಗಳಿಂದ ಕುವೈಟ್‌ನಲ್ಲಿ ಸೇವಾ ನಿರತ ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯಾದ ಕುವೈಟ್ ಕನ್ನಡ ಕೂಟದ (ಕು.ಕ.ಕೂ.) ತನ್ನ ವಾರ್ಷಿಕ ಮಹಾಸಭೆಯನ್ನು ಇತ್ತೀಚೆಗೆ ಇಲ್ಲಿನ ಖೈತಾನ್ನ ಭಾರತೀಯ ಸಮುದಾಯ ಶಾಲೆಯಲ್ಲಿ ನಡೆಸಿತು.
ಮಹಾಸಭೆಯ ಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಕಾರ್ಯಕ್ರಮದಲ್ಲಿ, 2020ರ ಕೂಟದ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು. ಸಿಎ| ಗುರುರಾಜ್ ರಾವ್ ಚುನಾವಣಾಧಿಕಾರಿ ಆಗಿದ್ದು, ಚುನಾವಣಾ ಪ್ರಕ್ರಿಯೆ ನಿರ್ವಹಿಸಿ ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು.

ರಾಜೇಶ ವಿಟ್ಟಲ್ (ಅಧ್ಯಕ್ಷ), ಸಂದೀಪ್ ಚಬ್ಬಾ (ಉಪಾಧ್ಯಕ್ಷ), ಪ್ರವೀಣ್‌ಕುಮಾರ್ ಶೆಟ್ಟಿ (ಕಾರ್ಯದರ್ಶಿ), ಪ್ರದೀಪ್ ರಾವ್ ಆಳುಗ್ಗೇಲು (ಖಜಾಂಚಿ) ಚುನಾಯಿತರಾದ ಸದಸ್ಯರು 2020ರ ವರ್ಷಕ್ಕೆ ಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಭೆಯಲ್ಲಿ ಅಧಿಕಾರ ಪದಗ್ರಹಣದ ಬಳಿಕ ನೂತನ ಕಾರ್ಯಕಾರಿ ಸಮಿತಿಗೆ ನೆರೆದ ಸದಸ್ಯರು ಶುಭ ಹಾರೈಸಿದರು.

More from the blog

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ..

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಡ್‌ ಲಸಿಕೆ...

ಸರಪಾಡಿ : 34ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚೇತನ್ ಬಜ ಆಯ್ಕೆ..

ಬಂಟ್ವಾಳ : ಶರಭೇಶ್ವರ ದೇವಸ್ಥಾನ ಸರಪಾಡಿ ಇದರ 34ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 3ನೇ ಬಾರಿ ಚೇತನ್ ಬಜ ಆಯ್ಕೆಯಾಗಿದ್ದಾರೆ.    

ಸೌಹಾರ್ದ ಬದುಕು ಕಟ್ಟೋಣ : ಡಾ.ಎನ್.ಇಸ್ಮಾಯಿಲ್..

ಮಂಗಳೂರು : ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್...

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...