ಬಂಟ್ವಾಳ : ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದೇರುಗಳ ಗರಡಿ ಕುತ್ತಿಲ ಇದರ ವಠಾರದಲ್ಲಿ ಜು.06 ಆದಿತ್ಯವಾರದಂದು “ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮ ನಡೆಯಲಿದೆ.

ದಿ| ರತ್ನಾಕರ ಕರ್ಕೇರ ಕುಟುಂಬ ಟ್ರಸ್ಟ್ (ರಿ.) ಕುತ್ತಿಲಗುತ್ತು, ಶ್ರೀರಾಮಾಂಜನೇಯ ಭಜನಾ ಮಂದಿರ (ರಿ.) ಶ್ರೀರಾಮನಗರ, ಶ್ರೀ ಉಮಾಮಹೇಶ್ವರ ಗೆಳೆಯರ ಬಳಗ ಕಜೆಕೊಡಿ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಸಿರಿಗುಂಡದಪಾಡಿ, ಶ್ರೀ ಬ್ರಹ್ಮಲಿಂಗೇಶ್ವರ ಮಹಿಳಾ ಕುಣಿತ ಭಜನಾ ಮಂಡಳಿ ಸಿರಿಗುಂಡದಪಾಡಿ,ಶ್ರೀ ಶ್ರೀ ಶಾರಾದೋತ್ಸವ ಸೇವಾ ಸಮಿತಿ ಇರ್ವತ್ತೂರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಕುತ್ತಿಲ, ಶ್ರೀರಾಮ ಭಜನಾ ಮಂದಿರ ನೈನಾಡು, ಬಿಲ್ಲವ ಸಮಾಜ ಸೇವಾ ಸಂಘ ಕುತ್ತಿಲ, ಕಿನ್ನಿದಾರು ಬಿಲ್ಲವ ಮಹಿಳಾ ಸಮಿತಿ ಕುತ್ತಿಲ,ಶ್ರೀ ಶನೈಶ್ವರ ಪೂಜಾ ಸಮಿತಿ ಮೂರ್ಜೆ, ಯಕ್ಷಗಾನ ಸಮಿತಿ ಪೆಲತ್ತಕಟ್ಟೆ, ಅತ್ತಾಜೆ ಕ್ರಿಕೆಟರ್ಸ್ ಅತ್ತಾಜೆ ಇವರ ಸಂಯುಕ್ತ ಆಶ್ರಯದಲ್ಲಿ “ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸುರೇಶ್ ಕರ್ಕೇರ ಕುತ್ತಿಲ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಲಾತಬೆಟ್ಟು ಗ್ರಾ.ಪಂ ನ ಅಧ್ಯಕ್ಷೆ ಶ್ರೀಮತಿ ಶಾರದಾ, ಮುಖ್ಯ ಅತಿಥಿಗಳಾಗಿ, ಶ್ರೀಮತಿ ಮಾಲತಿ ಅಧ್ಯಕ್ಷರು ಗ್ರಾ.ಪಂ ಇರ್ವತ್ತೂರು, ಕಜೆಕೋಡಿ ಉಮಾಮಹೇಶ್ವರಿ ದೇವಸ್ಥಾನ ಅಧ್ಯಕ್ಷ ಚಂದ್ರಶೇಖರ ಭಟ್ ಹಾಗೂ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಸ್ಥಳೀಯರಿಗಾಗಿ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಹಿಮ್ಮುಖ ಓಟ, ಮೂರು ಕಾಲಿನ ಓಟ ಹಾಳೆ ಎಳೆಯುವುದು, ಹಿರಿಯರ ಓಟ, ಹಗ್ಗ ಜಗ್ಗಾಟ, ನಿಧಿಶೋದನೆ 100 ಮೀಟರ್ ಓಟ, ಕಂಬಳ ಊಟ, ಗೂಟಕ್ಕೆ ರಿಂಗ್ ಹಾಕುವ ಆಟೋಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ.

ಇನ್ನು ಸಮಾರೋಪ ಕಾರ್ಯಕ್ರಮ ಅಧ್ಯಕ್ಷತೆಯನ್ನು ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಬಹುಮಾನ ವಿತರಣೆ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಶಾಂತ್ ಕರ್ಕೇರ, ಮುಖ್ಯ ಅತಿಥಿಗಳಾಗಿ ಮಂಗಳೂರು ಹಾಪ್ ಕಾಮ್ಸ್ ನ ಮಾಜಿ ಅಧ್ಯಕ್ಷರು ಲಕ್ಷ್ಮೀನಾರಾಯಣ ಉಡುಪ, ರಾಜೀವ ಶೆಟ್ಟಿ ಎಡ್ತೂರು ಕಂಬಳ ತೀರ್ಪುಗಾರರು ಉಪಸ್ಥಿತರಿರಲಿದ್ದಾರೆ.

