ಉಜಿರೆ: ದಕ್ಷಿಣಕನ್ನಡಜಿಲ್ಲೆಯಲ್ಲಿಅತಿವೃಷ್ಟಿಯಿಂದಾಗಿ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿದ್ದು ಅವುಗಳ ದುರಸ್ತಿಗಾಗಿ ಸರ್ಕಾರಕ್ಕೆ ೬೫ ಕೋಟಿರೂ. ವೆಚ್ಚದಕಾಮಗಾರಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕುತ್ಲೂರು ಬಳಿ ಇರುವಕುಕ್ಕಾಜೆ ಸೇತುವೆಯನ್ನುಕೂಡಾ ದುರಸ್ತಿಗೊಳಿಸಲಾಗುವುದು ಎಂದುದಕ್ಷಿಣಕನ್ನಡಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ.ಸೆಲ್ವಮಣಿ ಹೇಳಿದರು.
ಅವರು ಬುಧವಾರಕುತ್ಲೂರುಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿದಕ್ಷಿಣಕನ್ನಡಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಆಶ್ರಯದಲ್ಲಿ ಆಯೋಜಿಸಿದ ಶಾಲಾ ಅಕ್ಷರಕೈತೋಟ,ವಾಚನಾಲಯಮತ್ತುಕಂಪ್ಯೂಟರ್‌ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.


ಮೊಬೈಲ್ ಫೋನ್ ಹಾಗೂ ಟಿ.ವಿ.ಯಿಂದಾಗಿಇಂದುಪುಸ್ತಕ ಓದುವ ಹವ್ಯಾಸಕಡಿಮೆಯಾಗಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮಜ್ಞಾನಕ್ಷಿತಿಜವನ್ನುವಿಸ್ತರಿಸಿಕೊಳ್ಳಬೇಕು ಎಂದುಅವರು ಸಲಹೆ ನೀಡಿದರು.
ಉತ್ತಮ ಶಾಲೆ ಮತ್ತುದೇವಸ್ಥಾನಊರಿನ ಪ್ರಗತಿಯದ್ಯೋತವಾಗಿದ್ದುಜನರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ.
ಶಾಲೆಯಆವರಣಗೋಡೆಕಾಮಗಾರಿ ಮತ್ತು ಮಳೆ ಕೊಯ್ಲುತಕ್ಷಣಪ್ರಾಂಭಿಸಲುಅವರುಅನುಮತಿ ನೀಡಿಅನುದಾನ ಮಂಜೂರು ಮಾಡುವುದಾಗಿ ತಿಳಿಸಿದರು.
೨೦೧೮ರ ಡಿಸೆಂಬರ್‌ನಲ್ಲಿದ.ಕ.ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿಕುತ್ಲೂರು ಶಾಲೆಯಲ್ಲಿಗ್ರಾಮ ವಾಸ್ತವ್ಯ ಮಾಡಿ, ಶಾಲೆಯನ್ನು ಸರ್ವತೋಮುಖ ಪ್ರಗತಿಗಾಗಿದತ್ತು ತೆಗೆದುಕೊಳ್ಳಲಾಗಿದೆ.
ಇದರಿಂದಾಗಿ ಈ ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಏರಿಕೆಯಾಗಿದೆ. ಶಿಕ್ಷಕರ ನೇಮಕಾತಿಯೂಆಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯದ.ಕ.ಜಿಲ್ಲಾಉಪನಿರ್ದೇಶಕ ವೈ. ಶಿವರಾಮಯ್ಯ ಮಾತನಾಡಿ, ಈ ವರ್ಷ ಶಾಲೆಯಲ್ಲಿ ೬೬ ವಿದ್ಯಾರ್ಥಿಗಳು ಕಲಿಯುತ್ತಿದ್ದು ಪೂರ್ಣಕಾಲಿಕ ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಲಾಗಿದೆ.ಅತಿಥಿ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಶಾಲೆಗೆ ನೀಡುತ್ತಿರುವ ಸೇವೆಯನ್ನುಅವರು ಶ್ಲಾಘಿಸಿ ಅಭಿನಂದಿಸಿದರು.
ದ.ಕ. ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀನಿವಾಸ ನಾಯಕ್‌ಇಂದ್ರಾಜೆ, ಜಿಲ್ಲಾ ವಾರ್ತಾಅಧಿಕಾರಿಖಾದರ್ ಷಾ,ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದಅಧ್ಯಕ್ಷಆರ್.ಯನ್,.ಪೂವಣಿ ಶುಭಾಶಂಸನೆ ಮಾಡಿದರು.
ಅಧ್ಯಕ್ಷತೆ ವಹಿಸಿದ ನಾರಾವಿ ಗ್ರಾಮ ಪಂಚಾಯಿತಿಅಧ್ಯಕ್ಷರವೀಂದ್ರ ಪೂಜಾರಿ ಮಾತನಾಡಿಗ್ರಾಮೀಣ ಪ್ರದೇಶದಲ್ಲಿರುವಕುತ್ಲೂರು ಶಾಲೆಯಅಭಿವೃದ್ಧಿಗೆ ಪತ್ರಕರ್ತರು ನೀಡಿದ ಸಕ್ರಿಯ ಸಹಕಾರವನ್ನುಧನ್ಯತೆಯಿಂದ ಸ್ಮರಿಸಿದರು.
ರಾಮಚಂದ್ರ ಭಟ್‌ಕುಕ್ಕುಜೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಬೇಕಾದ ಮೂಲಭೂತ ಸವಲತ್ತುಗಳನ್ನು ನೀಡುವಂತೆಕೋರಿದರು.
ನಾರಾವಿ ಗ್ರಾಮ ಪಂಚಾಯಿತಿಉಪಾಧ್ಯಕ್ಷೆಯಶೋದಾ, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಸಮನ್ವಯಾಧಿಕಾರಿಗಣೇಶ್ ಐತಾಳ್, ಪ್ರಭಾಕರ ನಾರಾವಿ ಹಾಗೂ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಪುಷ್ಪರಾಜ ಶೆಟ್ಟಿ, ಜಿತೇಂದ್ರಕುಂದೇಶ್ವರ ಮತ್ತುಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಸ್ವಾಗತಿಸಿದರು.ಶಾಲೆಯ ಸಹಾಯಕ ಶಿಕ್ಷಕಿ ರೂಪಾಕುಮಾರಿಧನ್ಯವಾದವಿತ್ತರು.