ಕುರಿಯಾಳ ಗ್ರಾಮದ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ದೊಂಪದ ಬಲಿ ನೇಮೋತ್ಸವವು ಕಾಂಬೋಡಿಗುತ್ತು ಒಳಗುಡ್ಡೆ ದೈವಸ್ಥಾನದ ಬಳಿಯಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮತ್ತು ತಂತ್ರಿಗಳಾದ ಏರ್ಯ ನರಸಿಂಹ ಮಯ್ಯರವರ ಮಾರ್ಗದರ್ಶನದಲ್ಲಿ ಫೆ.11 ಆದಿತ್ಯವಾರದಂದು ರಾತ್ರಿ ನಡೆಯಲಿರುವುದು.

ಕಾರ್ಯಕ್ರಮಗಳು
ತಾ. 11-02-2024 ಆದಿತ್ಯವಾರ ಮುಂಜಾನೆ ಭಂಡಾರದ ಮನೆಯಿಂದ ಭಂಡಾರ ಹೊರಟು ಭಂಡಾರ ಆರೋಹಣ
ರಾತ್ರಿ ಕಾಂಬೋಡಿಗುತ್ತಿನ ಮನೆಯಲ್ಲಿ 8.00 ರಿಂದ 10.00 ಗಂಟೆಯವರೆಗೆ ಅನ್ನಸಂತರ್ಪಣೆ ನಂತರ ಉಗ್ಗೆದಲ್ತಾಯ ದೈವದ ದೊಂಪದಬಲಿ ಉತ್ಸವ ನಡೆಯಲಿದೆ.