ಶ್ರೀ ಕೊಡಮಣಿತ್ತಾಯ ,ಲೆಕ್ಕೆಸಿರಿ, ಮೈಸಂದಾಯ , ಹಿರಿಯಜ್ಜ, ಕುಪ್ಪೆಟ್ಟು ಪಂಜುರ್ಲಿ, ಮಂತ್ರಜಾವದೆ ,ಬಂಟ ಪಂಜುರ್ಲಿ ಮತ್ತು ಗಡುಪಾಡಿ ಜಾಗದ ಕಲ್ಲುರ್ಟಿ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಢಾ ಮಹೋತ್ಸವ ಮತ್ತು ನೇಮೋತ್ಸವ ಫೆ.18 ರಿಂದ ಫೆ.22 ರ ವರೆಗೆ ವೈಭವದಿಂದ ನಡೆಯಲಿದೆ ಎಂದು ಪ್ರತಿಷ್ಠಾಮಹೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಫೆ.16 ರಂದು ಆದಿತ್ಯವಾರ 3 ಗಂಟೆಗೆ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವಠಾರದಿಂದ ಮೂಲಸ್ಥಾನಕ್ಕೆ ಹಸಿರುಹೊರೆಕಾಣಿಕೆ ಮೆರವಣಿಗೆ ಸಾಗಿ ಬರಲಿದೆ.
ಶ್ರೀ ಕ್ಷೇತ್ರ ಪೂಂಜ ಇದರ ಅಸ್ರಣ್ಣರಾದ ಕೃಷ್ಣಪ್ರಸಾದ್ ಅವರು ಚಾಲನೆ ನೀಡಲಿದ್ದಾರೆ.
ಫೆ. 18 ರಂದು ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ. 19 ರಂದು ಪ್ರತಿಷ್ಠೆ ,ಪ್ರಧಾನ ಹೋಮ ,ಕಲಶಾಭಿಷೇಕ, ದೈವಗಳ ಚಾವಡಿ ಪ್ರವೇಶ, ಕಲಶಾಭಿಷೇಕ,ದೈವದ ಪ್ರತಿಷ್ಠಾ ದರ್ಶನ, ಧಾರ್ಮಿಕ ಕಾರ್ಯಕ್ರಮ ,ಅನ್ನಸಂತರ್ಪಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು , ರಾತ್ರಿ ಶ್ರೀ ಧರ್ಮರಸು ಉಳ್ಳಾಯ,ಮೈಸಂದಾಯ ಮತ್ತು ಕೊಡಮಣಿತ್ತಾಯ ದೈವಗಳ ನೇಮ ನಡೆಯಲಿದೆ.
ಫೆ. 20 ರಂದು ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಹಾಗೂ ಮೈಸಂದಾಯ ,ಲೆಕ್ಕೆಸಿರಿ , ಗಡುಪಾಡಿ ಜಾಗದ ಶ್ರೀ ಕಲ್ಲುರ್ಟಿ ಪಂಜುರ್ಲಿ ದೈವಗಳ ನೇಮಗಳು ನಡೆಯಲಿದೆ.
ಫೆ. 21 ರಂದು ಹಿರಿಯಜ್ಜ ದೈವದ ಕೋಲ ಹಾಗೂ ಕಲ್ಲುರ್ಟಿ ,ಮಂತ್ರಜಾವದೆ ದೈವಗಳ ಕೋಲ, ಫೆ. 22 ರಂದು ಶ್ರೀ ಬಂಟ ಪಂಜುರ್ಲಿ ದೈವದ ನೇಮ ನಡೆಯಲಿದೆ.
ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಈಗಾಗಲೇ 10 ಸಾವಿರ ಆಮಂತ್ರಣ ಪತ್ರಿಕೆಗಳನ್ನು ಈಗಾಗಲೇ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಪ್ರಭು, ಸೇವಾ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸನಿಲ್ , ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ಪೂಜಾರಿ,ಪ್ರಚಾರ ಸಮಿತಿ ಸಂಚಾಲಕ ದಿನೇಶ್ ರಾಯಿ ಉಪಸ್ಥಿತರಿದ್ದರು.

