ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ ಹಾಗೂ ಶಿಬರಿಕಲ್ಲ ಮಾಡ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶದ ಪ್ರಯುಕ್ತ ಮೂರು ಶಿಖರ ಕಲಶಗಳಿಗೆ ಮಂಗಳವಾರ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಮೆರವಣಿಗೆ ಮೂಲಕ ಕುಂಡಡ್ಕ ದೇವಸ್ಥಾನಕ್ಕೆ ಸಾಗಿಸಲಾಯಿತು.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ನವರಾಜ್ ಅಮೈ ವಿಶೇಷ ಪೂಜೆ ನಡೆಸಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಜಯರಾಮ ಬಲ್ಲಾಳ್, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ರಾಮ ಭಟ್ ನೀರಪಳಿಕೆ, ದಯಾನಂದ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಚಿದಾನಂದ ಪೆಲತ್ತಿಂಜ, ಪೂವಪ್ಪ ಕರಿಮಣ್ಣು, ದುರ್ಗಾಪ್ರಸಾದ್ ಅತಿಕಾರಬೈಲು, ಮಹಾಬಲಪೂಜಾರಿ ಅಳಕೆಮಜಲು, ವಿಜಯ ಪೂಜಾರಿ ಬಾಕಿಮಾರು, ಪ್ರಸಾದ್ ಮರುವಾಳ, ಸತೀಶ್ಚಂದ್ರ ಪಟ್ಲ, ವಿಜಯ ಬಾಕಿಮಾರು, ಪುರುಷೋತ್ತಮ್ ಕಾರ್ಯಾಡಿ, ಶಿಖರದ ಶಿಲ್ಪಿ ಮುರಳೀಧರನ್ ಪಯ್ಯನ್ನೂರು ಮತ್ತಿತರರು ಉಪಸ್ಥಿತರಿದ್ದರು.


ತಂತ್ರಿಗಳ ಆಗಮನ:
ಸಂಜೆ ಕ್ಷೇತ್ರಕ್ಕೆ ತಂತ್ರಿಗಳಾದ ಕುಂಟುಕುಡೇಲು ರಘುರಾಮ ತಂತ್ರಿಗಳ ಆಗಮಿಸಿದ್ದು, ಪೂರ್ಣಕುಂಭ ಸ್ವಾಗತದ ಮೂಲಕ ಎದುರುಗೊಳ್ಳಲಾಯಿತು. ನೂತನ ಗರ್ಭಗೃಹದ ದೇವಾಲಯದ ಶಿಲ್ಪಿ ಮೇಸ್ತ್ರಿ ಮರದ ಶಿಲ್ಪಗಳಿಂದ ಪರಿಗ್ರಹ, ಸ್ಥಳಶುದ್ದಿ ಸೇರಿ ವಿವಿಧ ಕಾರ್ಯಗಳು ನಡೆದು ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಅಸ್ತ್ರಕಲಶ ಪೂಜೆ, ಅಸ್ತ್ರಕಲಶಾಧಿವಾಸ ಕ್ರಿಯೆಗಳು ನಡೆಯಿತು. ಕರ್ಗಲ್ಲು ನೂಜಿ, ಕುಡ್ವ, ಕುಳ, ಕುಂಡಡ್ಕ ಮನೆತನಗಳವರು ಈ ಸಂದರ್ಭ ಉಪಸ್ಥಿತರಿದ್ದರು.