ವಿಟ್ಲ: ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರಾದ ಡಾ| ಗೋಪಾಲನಾಥ ಕದ್ರಿ ಹಾಗೂ ಪ್ರವೀಣ್ ಗೋಡ್ಕಿಂಡಿಯವರ ಸ್ಯಾಕ್ಸ್ ಪೋನ್ ಮತ್ತು ಬಾನ್ಸೂರಿ ಜುಗಲ್ ಬಂದಿ ಕಾರ್‍ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಈ ದಿಗ್ಗಜ ಕಲಾವಿದರಿಗೆ ತಾವೇ ರಚಿಸಿದ ಭಾವಚಿತ್ರವನ್ನು ಚಿತ್ರಕಲಾವಿದ ಟೀಲಾಕ್ಷ ಇವರು ಕಾಣಿಕೆಯಾಗಿ ನೀಡಿದರು .ಇವರು ವಿಟ್ಲದ ಅನ್ನಮೂಲೆ ನಿವಾಸಿ ಆಗಿದ್ದು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ರಾಷ್ಟ್ರ ಮಟ್ಟದ ಸಾಧನೆ ಮಾಡಿರತ್ತಾರೆ,ಪ್ರಸ್ತುತ ಇವರು ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

