ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಗಂಟೆ 6 ಕ್ಕೆ ಶ್ರೀ ಗಣಪತಿ ಹವನ, ಅಂಕುರ ಪೂಜೆ. ಶಯ್ಯಾಮಂಟಪದಲ್ಲಿ ಶ್ರೀ ದೇವರುಗಳಿಗೆ ಬೆಳಗ್ಗಿನ ಪೂಜೆ, ಸಾಮೂಹಿಕ ಪ್ರಾರ್ಥನೆ, ನವಗ್ರಹಾದಿದಶದಾನಗಳು ನಡೆದ ಬಳಿಕ ವೇ.ಮೂ. ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ, ವೇ.ಮೂ.ಗುರುರಾಜ ತಂತ್ರಿಯವರ ಉಪಸ್ಥಿತಿಯಲ್ಲಿ ಬೆಳಗ್ಗೆ ಗಂಟೆ 8..52ರ ಮೀನಲಗ್ನ ಸುಮುಹೂರ್ತಕ್ಕೆ ಶ್ರೀ ಗಣಪತಿ, ಶ್ರೀ ಶಾಸ್ತಾರ ಸಹಿತ ಶ್ರೀ ವಿಷ್ಣುಮೂರ್ತಿದೇವರ ಪುನಃ ಪತಿಷ್ಠೆ, ಗೋದರ್ಶನ, ಅಷ್ಟಮಂಗಲದರ್ಶನ. ಶಿಖರ ಪ್ರತಿಷ್ಠೆ ನಡೆಯಿತು.
ಆ ಬಳಿಕ ಕುಂಭೇಶ ಕರ್ಕರೀಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಜೀವಾವಾಹನೆ, ಮಂತ್ರಾವಾಹನೆ, ಅವಸ್ಥಾವಾಹನೆ, ಮಂತ್ರನ್ಯಾಸಾದಿಕ್ರಿಯೆಗಳು, ಅಷ್ಟಬಂಧ ಪ್ರತಿಷ್ಠೆ, ಪ್ರತಿಷ್ಠಾಬಲಿ ಅಲಂಕಾರಪೂಜೆ, ಮಹಾಪೂಜೆ, ಪ್ರಸಾದವಿತರಣೆ ನಡೆಯಿತು.
ಸಂಜೆ 6.30 ಗಂಟೆಗೆ ಅಂಕುರಪೂಜೆ ರಾತ್ರಿ 9 ಗಂಟೆಗೆ ಭದ್ರದೀಪ ಪ್ರತಿಷ್ಠೆ, ನಿತ್ಯನೈಮಿತ್ತಿಕಾದಿಗಳ ಪ್ರಮಾಣೀಕರಣ, ರಾತ್ರಿಸೋಪಾನದಳಲ್ಲಿ ಪೂಜೆ, ಕವಾಟಬಂಧನ ನಡೆಯಿತು.

