Thursday, July 3, 2025

ಮಡಂತ್ಯಾರು: ಕುಂಭಶ್ರೀ ಪೂರ್ವ ಪ್ರಾಥಮಿಕ-ಕೋಚಿಂಗ್ ಅಕಾಡೆಮಿ ಉದ್ಘಾಟನೆ

ವೇಣೂರು: ನಿಟ್ಟಡೆ ಕುಂಭಶ್ರೀ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಮತ್ತು ಕೋಚಿಂಗ್ ಅಕಾಡೆಮಿ ಕೇಂದ್ರವು ಮಡಂತ್ಯಾರ್‌ನ ಸೆಕ್ರೆಟ್‌ಹಾರ್ಟ್ ಕಾಂಪ್ಲೆಕ್ಸ್‌ನಲ್ಲಿ ಫೆ.21ರಂದು ಉದ್ಘಾಟನೆಗೊಂಡಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಅವರು ಮಾತನಾಡಿ, ಶಿಕ್ಷಣ ಪದ್ಧತಿಯಲ್ಲಿ ಇಂದು ನೈತಿಕ ಶಿಕ್ಷಣ ಕಡಿಮೆಯಾಗಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗೆ ಪೂರಕವಾದ ಆರ್ಥಿಕ ಶಿಕ್ಷಣಕ್ಕೆ ವಿದ್ಯಾಸಂಸ್ಥೆಗಳು ಇಂದು ಹೆಚ್ಚಿನ ಒತ್ತು ನೀಡುತ್ತಿದೆ. ಆರ್ಥಿಕ ಶಿಕ್ಷಣದ ಜತೆಗೆ ನೈತಿಕ ಮತ್ತು ಮೌಲ್ಯದಾರಿತ ಶಿಕ್ಷಣ ದೊರೆಯುವಂತಾಗಲಿ ಎಂದರು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಅವರು ಮಾತನಾಡಿ, ಮಕ್ಕಳಿಗೆ ಯಾವತ್ತೂ ಆಸ್ತಿ ಮಾಡಿ ಇಡಬೇಡಿ. ಉನ್ನತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೆ ಆಸ್ತಿಗಳನ್ನಾಗಿ ಮಾಡಿ ಎಂದರು. ಸಂಸ್ಥೆಯ ಸಂಚಾಲಕರಾದ ಗಿರೀಶ್ ಕೆ.ಹೆಚ್ ಶುಭ ಹಾರೈಸಿದರು. ಉಜಿರೆ ಎಸ್‌ಡಿಎಂ ಕಾಲೇಜಿನ ಉಪಾನ್ಯಸಕ ,ನೂತನ ಸಂಸ್ಥೆಯ ಮೇಲ್ವಿಚಾರಕಾರದ ಅಶ್ವಿತ್ ಕುಲಾಲ್ ಪಾಸ್ತವಿಕ ಮಾತಾನಾಡಿ, ಮಡಂತ್ಯಾರು ಸೆಕ್ರೆಟ್‌ಹಾರ್ಟ್ ಕಾಂಪ್ಲೆಕ್ಸ್‌ನ ಮಾಲಕ ಸ್ಟಾನಿ ಮಾಡ್ತಾ, ಕುಂಭಶ್ರೀ ವಿದ್ಯಾ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಧರ್ಮ ಗುರುಗಳು ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್, ನಿವೃತ್ತ ವಿಜಯ ಬ್ಯಾಂಕ್ ಪ್ರಬಂಧಕ ಸೋಮಯ್ಯ ಅನೈನಡೆ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ತಾ.ಪಂ. ಸದಸ್ಯೆ ವಸಂತಿ, ಕಾಲೇಜಿನ ಪ್ರಾಚಾರ್ಯ ರಕ್ಷಿತ್ ಕುಲಾಲ್ ಬಿ.ಇ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಗಣೇಶ್ ಹೊಸಪಟ್ಣ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ ಪಾಣೂರು, ಗ್ರಾ .ಂ ಮಾಜಿ ಸದಸ್ಯ ಅಬ್ದುಲ್ ರಹೀಮಾನ್ ಪಡ್ಪು ಮಡಂತ್ಯಾರ್ ,ಕುಂಭಶ್ರೀ ಮಹಿಳಾ ಮಂಡಲದ ಸದಸ್ಯರಾದ ಶೈಲಜಾ ಸತೀಶ್, ಯಶಲತಾ ಅಮ್ಮಾಜಿ ಮತ್ತಿತರು ಉಪಸ್ಥಿತರಿದ್ದರು.
ಪ್ರೌಢ ಶಾಲಾ ವಿಭಾಗದ ಉಪ ಮುಖ್ಯ ಶಿಕ್ಷಕಿ ಅಪರ್ಣ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಕ್ಷತಾ ಮತ್ತು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಿರೂಪಿಸಿ, ಮುಖ್ಯ ಶಿಕ್ಷಕಿ ಉಷಾ ಜಿ. ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ಸಹಕರಿಸಿದರು.

 

More from the blog

Bantwal : BLO ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡುವಂತೆ ಒತ್ತಾಯ..

ಬಂಟ್ವಾಳ : ಸರಕಾರಿ ನೌಕರರಲ್ಲದ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು BLO ಕೆಲಸದಿಂದ ಕೈಬಿಡುವಂತೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ.)ದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಅವರು ತಹಶಿಲ್ದಾರ್ ಅವರಿಗೆ...

ದ.ಕ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ ಕೆಜಿ, ಯುಕೆಜಿ ಆರಂಭ!

ಮಂಗಳೂರು : ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲು ಸಿದ್ಧತೆ ನಡೆಸಿದೆ. ಈ ಉಪಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ 70...

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ..

ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪೇಟೆಯಲ್ಲಿ ಕೆಲವು ದಿನಗಳಿಂದ ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಮಂಗಳವಾರ ಬೆಳಗ್ಗೆ ಏಕಾಏಕಿ ಅಟೋರಿಕ್ಷಾಗಳು ರಸ್ತೆಯಲ್ಲಿ...

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...