ಬಂಟ್ವಾಳ: ಇಚ್ಲಂಪಾಡಿ ದರ್ಬಾರ್ ಕಟ್ಟೆ ಕುಂಬಳೆಯ ಶ್ರೀ ರಾಜರಾಜೇಶ್ವರಿ ಪ್ರಸನ್ನ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಾದೊಂದಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಹಮ್ಮದ್ ನಗರದ ಸಾಯಿದೀಪ್ ಹಾಸ್ಪಿಟಲ್ ನ ಅಧ್ಯಕ್ಷ ಎಸ್.ಎಸ್. ದೀಪಕ್, ಎಮ್.ಆರ್.ಜಿ. ಗ್ರೂಪ್ ಇದರ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮುಖ್ಯಸ್ಥ ಸನತ್ ಶೆಟ್ಟಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿಗಳಾದ ಯುಟಿ ಆಳ್ವ, ಸಿ ಕೆ ನಾರಾಯಣ ಪುಣಿಕ್ಕರ್, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಸಹ್ಯಾದ್ರಿ ಎಜ್ಯುಕೇಷನ್ ಟ್ರಸ್ಟ್ ಇದರ ಅಧ್ಯಕ್ಷ ಮಂಜುನಾಥ ಭಾಂಡಾರಿ ಮತ್ತಿತರರು ಉಪಸ್ಥಿತರಿದ್ದರು

