Saturday, January 31, 2026

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಾರ್ಥಿಸುತ್ತೇನೆ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಕುಂಭಮೇಳದ ತೀರ್ಥ ಸ್ನಾನ ಹಾಗೂ ಅಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಕುರಿತಾಗಿ ನೀಡಿರುವ ಹೇಳಿಕೆ, ಒಬ್ಬ ಭಾರತೀಯನಾಗಿ ನನಗೆ ಅತ್ಯಂತ ನೋವನ್ನುಂಟು ಮಾಡಿದೆ.

ಮೌನಿ ಅಮಾವಾಸ್ಯೆಯ ಹಿಂದಿನ ದಿನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡುವ ಪುಣ್ಯ ನನಗೆ ಲಭಿಸಿತು. 50 ಕೋಟಿಗೂ ಅಧಿಕ ಭಕ್ತರು ತೀರ್ಥ ಸ್ನಾನ ಮಾಡಲು ಉತ್ತರಪ್ರದೇಶ ಸರಕಾರ ಮಾಡಿರುವ ಅತ್ಯದ್ಭುತ ವ್ಯವಸ್ಥೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪೊಲೀಸ್ ಇಲಾಖೆಯಂತು ಸುವ್ಯವಸ್ಥೆಗಾಗಿ ತಮ್ಮನು ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ. ಕೇಂಬ್ರಿಜ್ ಯೂನಿವರ್ಸಿಟಿಯ ವಿದ್ಯಾರ್ಥಿಗಳಿಗೆ ಕುಂಭಮೇಳದ ವ್ಯವಸ್ಥೆ ಒಂದು ಅಧ್ಯಯನದ ವಿಷಯ ಅಂದರೆ ಅದು ಎಷ್ಟು ಉನ್ನತವಾದದ್ದು ಎಂದು ನಾವು ಕಲ್ಪಿಸಿಕೊಳ್ಳಬಹುದು. ನಾನೊಬ್ಬ ಭಾಜಪದ ಕಾರ್ಯಕರ್ತನಾಗಿ ಅಥವಾ ವಿಧಾನಪರಿಷತ್ ಸದಸ್ಯನಾಗಿ ಈ ಮಾತನ್ನು ಹೇಳ್ತಾ ಇಲ್ಲ. ಒಬ್ಬ ಭಾರತೀಯನಾಗಿ ನಾನು ಯೋಗಿ ಆದಿತ್ಯನಾಥ್ ಸರಕಾರದ ಪ್ರಚಂಡ ವ್ಯವಸ್ಥೆಗಾಗಿ ಅವರಿಗೆ ನಾನು ಶತ ನಮನಗಳನ್ನು ಸಲ್ಲಿಸುತ್ತೇನೆ. ನನ್ನ ಮಾತಿನಲ್ಲಿ ನಂಬಿಕೆ ಇಲ್ಲವಾದರೆ ಮಾನ್ಯ ಖರ್ಗೆಯವರು ತಮ್ಮದೇ ಪಕ್ಷದ ಮಾನ್ಯ ಸಭಾಧ್ಯಕ್ಷರಾದ ಖಾದರ್ ಅವರು ಪ್ರಯಾಗ ದರ್ಶನ ಮಾಡಿ ಬಂದಿದ್ದಾರೆ ಅವರನ್ನು ಕೇಳಿಕೊಳ್ಳಬಹುದು.

1954ರಲ್ಲಿ ಇದೇ ಪ್ರಯಾಗದಲ್ಲಿ ಕುಂಭಮೇಳ ನಡೆದಾಗ ಸಾವಿರಾರು ಮಂದಿ ಕಾಲ್ತುಳಿತಕ್ಕೆ ಒಳಗಾಗಿದ್ದರು ಎಂದು ವರದಿಗಳು ಸಾಕ್ಷ್ಯ ನುಡಿಯುತ್ತವೆ. ಹಾಗಂತ ಆ ಘಟನೆಗೆ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಕಾರಣರೆಂದು ನಾವು ಖಂಡಿತವಾಗಿ ಹೇಳೋದಿಲ್ಲ. ಯಾವುದೇ ಪಕ್ಷದ ಜನಪ್ರತಿನಿಧಿಯಾದರು ದೇಶದ ಪ್ರಜೆಗಳಿಗೆ ಕೇಡಾಗಲಿ ಎಂದು ಬಯಸುವುದಿಲ್ಲ. ಹಾಗಿರುವಾಗ ನಿನ್ನೆ ನಡೆದ ಘಟನೆಗೆ ಸರಕಾರವೇ ಹೊಣೆ ಎಂದು ರಾಜಕೀಯ ಮಾಡುವುದು ಎಷ್ಟು ಸರಿ ಖರ್ಗೆ ಅವರೇ.

ಕುಂಭಮೇಳ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಒಬ್ಬ ನಿಜವಾದ ಭಾರತೀಯನಾದವನು ಕುಂಭಮೇಳ ಸಂಪೂರ್ಣ ಯಶಸ್ವಿಯಾಗಲಿ ಎಂದೇ ಹಾರೈಸುತ್ತಾನೆ. ತಮಗೂ ಅಂತಹ ಒಳ್ಳೆಯ ಮನಸ್ಸಿದೆ. ಆದರೆ ನಿಮ್ಮೊಳಗಿನ ರಾಜಕೀಯ ಪ್ರೇರಿತ ಮನಸ್ಸು ನಿಮ್ಮನ್ನು ಹಾದಿ ತಪ್ಪಿಸುತ್ತಿದೆ. ನೀವು ಹಿರಿಯರು ದಯವಿಟ್ಟು ನಿಮ್ಮ ಹಿರಿತನಕ್ಕೆ ಭಾರತೀಯರೆಲ್ಲರೂ ಗೌರವ ಕೊಡುವಂತೆ ನಡೆದುಕೊಳ್ಳಿ ಎಂದು ತಿಳಿಸಿದರು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...

ಫೆ.3ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಮಹಿಳಾ & ಮಕ್ಕಳ ಸಂಭ್ರಮೋತ್ಸವ

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ ( ರಿ.) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದ.ಕ. ಇದರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ ಫೆ.3ರಂದು ಮಂಗಳವಾರ...