ಕೋವಿಡ್ 19 ನ ಸಮಯವನ್ನು ಬೇರೆ ಬೇರೆ ಕಡೆಗಳಲ್ಲಿ ಯುವಕರು ಉತ್ತಮ ಕಾರ್ಯಗಳಿಗೆ ಉಪಯೋಗಿಸಿ ಸಮಾಜಕ್ಕೆ ಮಾದರಿಯಾಗಿರುವುದರ ಬಗ್ಗೆ ನಾವು ನೋಡಿದ್ದೇವೆ ಕೇಳಿದ್ದೇವೆ.

ಆದರೆ ಬಂಟ್ವಾಳ ತಾಲೂಕಿನ ಕುಲಾಲ ಕುಂಬಾರ ಯುವ ವೇದಿಕೆಯವರು ಸೂರು ಇಲ್ಲದೆ ಅತ್ರಂತ್ರರಾಗಿದ್ದ ಬಡ ಕುಟುಂಬವನ್ನು ಸ್ವತಂತ್ರವನ್ನಾಗಿ ಮಾಡಿದೆ.
ಬಡ ಮಹಿಳೆಯ ಕಣ್ಣೀರು ಒರೆಸುವ ಮಹತ್ತರವಾದ ಕೊಡುಗೆಯನ್ನು ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಸಂಘಟನೆಯ ವತಿಯಿಂದ ಮನೆ ನಿರ್ಮಿಸಿ ಬಳಿಕ ಗೃಹಪ್ರವೇಶ ಮಾಡಿ ಮನೆ ಹಸ್ತಾಂತರ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಂಟ್ವಾಳ:ಕುಲಾಲ ಕುಂಬಾರ ರ ಯುವವೇದಿಕೆ ಬಂಟ್ವಾಳ ಇವರ ಮುಂದಾಳತ್ವದಲ್ಲಿ ನಿರ್ಮಿಸಿದ “ಕುಂಭ ಕುಟೀರ” ದ ಗೃಹಪ್ರವೇಶ ಹಾಗೂ ಮನೆ ಹಸ್ತಾಂತರ ಜೂ. 28 ರ ಆದಿತ್ಯವಾರ ಸಜೀಪಮೂಡದ ಕಂದೂರಿನಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ “ಕುಂಭ ಕುಟೀರ” ನಾಮಪಲಕ ಉದ್ಘಾಟನೆ.
ಬೆಳ್ತಂಗಡಿ ಬಜಿರೆಯ ಗುರು ಚೈತನ್ಯ ಆಶ್ರಮದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ತೆಂಗಿನ ಸಸಿ ನೆಟ್ಟರು.
ಕೋವಿಡ್ 19 ನ ಲಾಕ್ ಡೌನ್ ಅವಧಿಯನ್ನು ಸದುಪಯೋಗ ಮಾಡಿಕೊಂಡ ಈ ವೇದಿಕೆ ಮನೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಕುಲಾಲ ಸಮುದಾಯದ ತೀರಾ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟು ಆದರ್ಶ ಮೆರೆದಿದೆ.

ಸಜೀಪ ಮೂಡ ಕಂದೂರಿನಲ್ಲಿ ಕಮಲಾ ಎಂಬ ಬಡ ಮಹಿಳೆಗೆ ಸ್ವಂತ ಜಾಗವಿದ್ದರೂ ಕೆಲವೊಂದು ಕಾರಣಗಳಿಂದ ಮನೆ ಬಿದ್ದು ಹೋಗಿತ್ತು. ಬಳಿಕ ಎರಡು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ವಾಸಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಜೊತೆಗೆ ಬಡ ಮಹಿಳೆಗೆ ಮಕ್ಕಳನ್ನು ಸಾಕುವುದರ ಜೊತೆಗೆ ಜೀವನ ಕಷ್ಟ ಸಾಧ್ಯವಾಯಿತು . ಲಾಕ್ ಡೌನ್ ಸಮಯದಲ್ಲಿ ಇವರ ಸ್ಥಿತಿ ಹೇಳತೀರದಷ್ಟು ಕಠಿಣ ವಾಗಿತ್ತು.

ಲಾಕ್ ಡೌನ್ ಅವಧಿಯಲ್ಲಿ ಇವರ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಕುಲಾಲ ಕುಂಬಾರ ಯುವವೇದಿಕೆ ಶ್ರಮದಾನದ ಮೂಲಕವೇ ಮನೆಯ ನಿರ್ಮಾಣ ಮಾಡಿದರು.
ಬಳಿಕ ಗೃಹ ಪ್ರವೇಶವನ್ನು ಅದ್ದೂರಿಯಾಗಿ ಮಾಡಿ ಮನೆಯ ಹಸ್ತಾಂತರ ಕಾರ್ಯ ನೆರವೇರಿಸಿದರು.

ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಮನೆಯ ಕೀಲಿ ಕೈಯನ್ನು ಮನೆಯ ವರಿಗೆ ನೀಡುವ ಮೂಲಕ ಮನೆ ಹಸ್ತಾಂತರ ನಡೆಯಿತು.
ಅದಕ್ಕೂ ಮೊದಲು ಧಾರ್ಮಿಕ ವಿಧಿ ವಿಧಾನ ಮೂಲಕ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಗಳು ವಿಧಿವತ್ತಾಗಿ ನಡೆದಿತ್ತು.
ಸುಸಜ್ಜಿತ ಮನೆನುರ್ಮಾಣದಿಂದ ಹಿಡಿದು ಗೃಹ ಪ್ರವೇಶದವರೆಗೂ ಎಲ್ಲಾ ಜವಬ್ದಾರಿಯೂ ಸಂಘಟನೆಯ ವತಿಯಿಂದ ನಡೆಯಿತು.

ಕುಂಬಾರ ಯುವವೇದಿಕೆ ರಾಜ್ಯಧ್ಯಕ್ಷ ತೇಜಸ್ವಿರಾಜ್, ಜಿಲ್ಲಾಧ್ಯಕ್ಷ ಸುಧಾಕರ ಸುರತ್ಕಲ್, ಪ್ರಮುಖರಾದ ಮಯೂರ್ ಉಳ್ಳಾಲ್, ಚಂದ್ರಹಾಸ ಪಲ್ಲಿಪಾಡಿ, ಗಣೇಶ್ ಕುಲಾಲ್ ಸುರತ್ಕಲ್, ಅಕ್ಷಯ್ ಬಂಜನ್, ಸುದೀರ್ ಕುಡುಪು, ಬೋಜ ಅಡ್ಯಾರು, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಸೇಸಪ್ಪ ಮಾಸ್ಟರ್, ಸದಾಶಿವ ವಗ್ಗ, ರೋಟರಿ ಅಧ್ಯಕ್ಷ ಪದ್ಮನಾಭ ರೈ, ಲಯನ್ಸ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಬಂಟ್ವಾಳ ಕರಾವಳಿ ಕುಂಭಾರ ಯುವವೇದಿಕೆ ವಿಧಾನಸಭಾ ಘಟಕ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಸ್ಥಾಪಕಾಧ್ಯಕ್ಷ ಆನಂದ ಕುಲಾಲ್ ಮಿತ್ತಪರಾರಿ, ಗೌರವಾಧ್ಯಕ್ಷ ನಾರಾಯಣ ಸಿ.ಪೆರ್ನೆ, ಕಾರ್ಯದರ್ಶಿ ಹರಿಪ್ರಸಾದ್ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

