ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ಕಡೆಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.

ಎರಡು ದಿನಗಳಿಂದ ಮೋಡದ ವಾತಾವರಣ ಕಂಡುಬಂದಿತ್ತು ಶುಕ್ರವಾರ ಸಂಜೆ ಸಾಮಾನ್ಯ ಮಳೆಯಾಗಿತ್ತು. ಸುಳ್ಯ, ಕಡಬ ಪರಿಸರದ ಕೊಲ್ಲಮೊಗ್ರ, ಕಲ್ಲಾಜೆ, ಬಳ್ಳ, ಗುತ್ತಿಗಾರು, ಸುಬ್ರಹ್ಮಣ್ಯ, ಮರ್ಕಂಜ, ಎಲಿಮಲೆ, ಸಂಪಾಜೆ, ಅರಂತೋಡು ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆಯಾಗಿದೆ. ಭೂಮಿ ತಂಪಾಯಿತು.