Friday, June 27, 2025

ಪೊಳಲಿ ದೇವಸ್ಥಾನ ಕ್ಕೆ ಹೊರೆ ಕಾಣಿಕೆ ಸಮರ್ಪಣೆ ಯ ಅಂಗವಾಗಿಕುಕ್ಕಟ್ಟೆಯಲ್ಲಿ ಪೂರ್ವಭಾವಿ ಸಭೆ

ಪೊಳಲಿ ದೇವಸ್ಥಾನ ಕ್ಕೆ ಹೊರೆ ಕಾಣಿಕೆ ಸಮರ್ಪಣೆ ಯ ಅಂಗವಾಗಿ ಪೂರ್ವಭಾವಿ ಸಭೆ ಇಂದು ಕುಕ್ಕಟ್ಟೆಯಲ್ಲಿ ನಡೆಯಿತು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಸದ ಅಂಗವಾಗಿ ಮುತ್ತೂರು, ಕೊಳವೂರು , ಮೊಗರು ಗ್ರಾಮದ ಭಕ್ತಾಭಿಮಾನಿಗಳು ಮಾ.  04 ರಂದು ಮಧ್ಯಾಹ್ನ ತಮ್ಮ ಗ್ರಾಮದಿಂದ ಶ್ರೀ ಕ್ಷೇತ್ರ ಪೊಳಲಿಗೆ ಸಲ್ಲಿಸಲ್ಪಡುವ ಹಸಿರು ಹೊರ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಭೆಯು ಪೊಳಲಿ ದೇವಸ್ಥಾನದ ಬ್ರಹ್ಮಕಲಸದ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಮುತ್ತೂರು ಕೃಷ್ಣರಾಜ ಮಾರ್ಲರ ಅಧ್ಯಕ್ಷತೆಯಲ್ಲಿ ಮೊಗರು ಕುಕ್ಕಟ್ಟೆಯ ವಿದ್ಯಾ ಭಾರತಿ ಸಭಾ ಭವನದಲ್ಲಿ ನಡೆಯಿತು .

ಪೊಳಲಿ ಬ್ರಹ್ಮ ಕಲಸದಲ್ಲಿ ದೇವರ ಸೇವೆ ಮಾಡುವಂತಹ ಭಾಗ್ಯ ಭಕ್ತಭಿಮಾನಿಗಳಾದ ನಮಗೆಲ್ಲ ದೊರಕಿರುವುದು ಸಂತೋಷದ ವಿಷಯ ಗ್ರಾಮದ ನಾವೆಲ್ಲರೂ ಒಗ್ಗಟ್ಟಾಗಿ ದೇವರ ಈ ಪುಣ್ಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗೋಣ . ಗ್ರಾಮದ ಪ್ರತಿ ಮನೆಯಿಂದ ತಮ್ಮಿಂದಾದ ಹೊರೆ ಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ಸಲ್ಲಿಸೋಣ ಮತ್ತು ತಮ್ಮ ಗ್ರಾಮದಿಂದ ನಡೆಯುವ ಹೊರೆ ಕಾಣಿಕೆಯ ಕಾರ್ಯಕ್ರಮವು ನಾವೆಲ್ಲರೂ ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ . ಮಾ.04 ರಿಂದ ಮಾ.13 ಕ್ಷೇತ್ರದಲ್ಲಿ ಬ್ರಹ್ಮಕಲಸ ಕಾರ್ಯಕ್ರಮವು ನಡೆಯಲಿದ್ದು ಮಾ. 10 ರಂದು ದೇವರ ಪ್ರತಿಷ್ಠೆ ಮತ್ತು ದೇವರ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಈ ಪುಣ್ಯ ಕಾರ್ಯದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಭಿಮಾನಿಗಳು ಆಗಮಿಸಿದ್ದು ಈ ಕಾರ್ಯಕ್ರಮದ ಯಶಸ್ಸಿನ ದೃಷ್ಟಿಯಿಂದ ನಮ್ಮ ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಮಾಡಬೇಕೆಂದು ಸಭೆಯಲ್ಲಿ ಕೃಷ್ಣ ರಾಜ ಮಾರ್ಲರು ವಿನಂತಿಸಿದರು . ಹೊರೆ ಕಾಣಿಕೆಯ ಬಗ್ಗೆ ಸಭೆಯಲ್ಲಿ ಭಕ್ತಾಭಿಮಾನಿಗಳ ಸಲಹೆ ಸೂಚನೆಯನ್ನು ಪಡೆಯಲಾಯಿತು . ಈ ಸಂದರ್ಭದಲ್ಲಿ ಕೊಳವೂರು ಸದಾನಂದ ಶೆಟ್ಟಿ ಮೊಗರು ವಿಧ್ಯಾಚರಣ ಭಂಡಾರಿ ನಾರಳ ಚಂದ್ರಹಾಶ್ ಶೆಟ್ಟಿ , ಕಿಲೆಂಜಾರು ತಿಮ್ಮಪ್ಪ ಶೆಟ್ಟಿ ಅಗರಿ ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ ಹಾಗೂ ಮುತ್ತೂರು ಕೊಳವೂರು ಕಿಲೆಂಜಾರು ಮೊಗರು ಗ್ರಾಮದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು . ಶಂಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...