ಕುಕ್ಕಾಜೆ: ಮಂಚಿ ಕುಕ್ಕಾಜೆ ಎಸ್. ಎಸ್. ಎಫ್. ಹಾಗೂ ಎಸ್. ವೈ. ಎಸ್. ಇದರ 25ನೇ ವಾರ್ಷಿಕ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಧರ್ಮ ಅಳಿಯದೆ ಜಗತ್ತು ಉಳಿಯಬೇಕು,ಅದಕ್ಕಾಗಿ ಪ್ರೀತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಕಾರ್ಯಕ್ರಮ ನಡೆಸಿ ಮಾನವಿಯತೆಯಿಂದ ಬದುಕು ನಡೆಸಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಚಿ ಉಸ್ತಾದ್, ಇಸ್ಲಾಮಿನ ನೈಜ ಆದರ್ಶ ಕೈ ಬಿಡದೆ ಜೀವನ ನಡೆಸಿ ಎಂಬ ಸಂದೇಶ ನೀಡಿದರು.


ಅಬೂಬಕರ್ ಸಿದ್ದೀಖ್ ಮಹ್ಮೂದಿ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ದ.ಕ. ಜಿ.ಪಂ. ಸದಸ್ಯ ಯಂ. ಎಸ್. ಮುಹಮ್ಮದ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲೀ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಖ್ ಕುಕ್ಕಾಜೆ ಶುಭ ಹಾರೈಸಿ ಮಾತನಾಡಿದರು.

ಮಂಚಿ ಗ್ರಾ.ಪಂ. ಸದಸ್ಯ ಜಿ.ಯಂ. ಇಬ್ರಾಹಿಮ್, ಬದ್ರುದೀನ್ ಮಂಚಿ, ಸಮೀವೂಲ್ಲ ಕುಕ್ಕಾಜೆ, ಕುಕ್ಕಾಜೆ ಶರಪುಲ್ ಕಮಿಟಿ ಅಧ್ಯಕ್ಷ ಝೈನುದ್ದೀನ್, ಕುಕ್ಕಾಜೆ ಶೈನ್ ಗೈಸ್ ಅಧ್ಯಕ್ಷ ಅಬ್ದುಲ್ ಘಫಾರ್, ಜಿ. ಎಸ್. ಇ. ಆರ್. ಅಧ್ಯಕ್ಷ ಶರೀಪ್ ಕುಕ್ಕಾಜೆ, ಕೊಲ್ನಾಡ್ ಗ್ರಾ. ಪಂ. ಸದಸ್ಯ ಎ.ಬಿ. ಅಬ್ದುಲ್ಲ ಉಸ್ಮಾನ್ ಕುಕ್ಕಾಜೆ, ಕುಕ್ಕಾಜೆ ದ.ಕ.ಹಿ.ಪ್ರಾ.ಶಾಲೆ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಕುಕ್ಕಾಜೆ, ಅಬೂಬಕರ್ ಲತೀಫಿ ಸುನ್ನಿ ಮಹಲ್ ಕಯ್ಯೂರ್ ಬಿ. ಎ. ಇಬ್ರಾಹಿಮ್ ಸಖಾಫಿ ದಾವಣಗೆರೆ, ಎಸ್ ಎಸ್ ಎಫ್ ದ ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಕುಕ್ಕಾಜೆ ಎಸ್ ಎಸ್ ಎಫ್ ಶಾಖ ಅಧ್ಯಕ್ಷ ಮುಹಮ್ಮದ್ ಶರೀಪ್ ಮೊದಲಾದವರು ಉಪಸ್ಥಿತರಿದ್ದರು.

ಧಾರ್ಮಿಕ ಕೇಂದ್ರದಗಳಿಗೆ ಸ್ಥಳ ದಾನ ಮಾಡಿದ ಕೆ. ಸಿ. ಯಫ್ ಜಿದ್ದಾ ಬನೂಮಾಲಿಕ್ ಘಟಕದ ಅಧ್ಯಕ್ಷ ಅಬ್ಬಾಸ್ ಹಾಜಿ ಕಾಪಿಕ್ಕಾಡ್ ಕುಕ್ಕಾಜೆ ಹಾಗೂ ಕೆ. ಸಿ ಯಫ್ ಜಿದ್ದಾ ಬನೂಮಾಲಿಕ್ ಘಟಕದ ಸದಸ್ಯ ಮುಹಮ್ಮದ್ ರಫೀಖ್ ಕುಕ್ಕಾಜೆ ಇವರನ್ನು ಸನ್ಮಾನಿಸಲಾಯಿತು.
ಎಸ್. ವೈ. ಎಸ್. ಅಧ್ಯಕ್ಷ ಮಹ್ಮೂದ್ ಸಅದಿ ಸ್ವಾಗತಿಸಿ, ಎಸ್ ಎಸ್ ಎಫ್ ಕುಕ್ಕಾಜೆ ಶಾಖಾ ಕಾರ್ಯದರ್ಶಿ ಸಫ್ವಾನ್ ವಂದಿಸಿದರು. ಕೆ.ಯಂ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

