Wednesday, February 12, 2025

ಕರಾರಸಾನಿಗಮದ ಸಹಾಯಕ ಕಾರ್ಯ ಅಧೀಕ್ಷಕರಿಗೆ ಬೀಳ್ಕೋಡುಗೆ

ಬಂಟ್ವಾಳ : ಕಳೆದ 35 ವರ್ಷಗಳಿಂದ ಕ.ರಾ.ರ.ಸಾ.ನಿಗಮದಲ್ಲಿಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಕಾರ್ಯ ಅಧೀಕ್ಷಕರಾಗಿದ್ದ ಅಂತೋನಿ ಲಿಯೋ ತಾವ್ರೋ ರವರ ಬೀಳ್ಕೊಡುಗೆ ಸಮಾರಂಭ ಕ.ರಾ.ರ.ಸಾ.ನಿಗಮದ ಬಿ.ಸಿ.ರೋಡು ಘಟಕದಲ್ಲಿ  ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ವ್ಯವಸ್ಥಾಪಕರಾದ ಶ್ರೀಷ್ ಭಟ್ ವಹಿಸಿ ತಾವ್ರೋ ಅವರು ಕಳೆದ 35 ವರ್ಷದ ತಮ್ಮ ಸೇವೆಯಲ್ಲಿ ದಕ್ಷ,ಪ್ರಾಮಾಣಿಕತೆ ಹಾಗೂ ತಂಡ ಮನೋಭಾವದ ಮೂಲಕ  ನಿರ್ವಹಿಸಿದ್ದು,  ಅವರ ಈ ಸೇವೆ ತಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿನಂದಿಸಿದರು.ಈ ಸಂದರ್ಭದಲ್ಲಿ ನಿಗಮದ ಬಿ.ಸಿ.ರೋಡು ಘಟಕದ ಸಿಬ್ಬಂದಿಗಳ ವತಿಯಿಂದ ಅಂತೋನಿ ಲಿಯೋ ತಾವ್ರೋ ದಂಪತಿಯನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಮಂಗಳೂರು ವಿಭಾಗದ ಅಂಕಿ ಅಂಶ ಅಧಿಕಾರಿ ಪಿ.ಇಸ್ಮಾಯಿಲ್ ಅತಿಥಿಯಾಗಿ ಭಾಗವಹಿಸಿ ತಾವ್ರೋ ಅವರ ಸೇವೆಯನ್ನು ಶ್ಳಾಘಿಸಿದರು.ಘಟಕದ ಸಿಬಂದಿಗಳಾದ ಜಯರಾಮ್,ಸಂತೋಷ್ ಭಟ್,ರಮೇಶ್,ಅತಾವುಲ್ಲಾ,ಗಣೇಶ್ ಅವರು ಸಮಯೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಂಚಾರ ನಿರೀಕ್ಷಕ ಗಣೇಶ್ ಪೈ ಸ್ವಾಗತಿಸಿ,ಪ್ರಸ್ತಾವಿಸಿದರು.ಸುರೇಶ್ ರೈ ವಂದಿಸಿದರು.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...