Friday, January 30, 2026

ಕೆ.ಎಸ್.ಆರ್.ಟಿ.ಸಿ. ನೌಕರರ ಮು‌ಷ್ಕರ: ಬಾಣಸಿಗರಾದ ಕೆ.ಎಸ್.ಆರ್.ಟಿ.ಸಿ. ನೌಕರರು

ಉಜಿರೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳದಲ್ಲಿರುವ ಕೆ.ಎಸ್.ಆರ್.ಟಿ.ಸಿ.ಡಿಪೊದಿಂದ ಯಾವುದೇ ಬಸ್‌ಗಳು ಸಂಚಾರ ಮಾಡಿಲ್ಲ.
ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಊಟ, ಉಪಾಹಾರದ ವ್ಯವಸ್ಥೆ ಮಾಡಿಕೊಂಡರು. ಚಾಲಕರು, ನಿರ್ವಾಹಕರು ಸೌಟು ಹಿಡಿದು ಊಟ ತಯಾರಿಸಿ, ಪ್ರಯಾಣಿಕರಿಗೂ ನಳಪಾಕದ ಸೊಗಡನ್ನು ತಿಳಿಸಿದರು.
ಪ್ರಯಾಣಿಕರ ಪರದಾಟ: ಶುಕ್ರವಾರ ಧರ್ಮಸ್ಥಳದಿಂದ ಎಲ್ಲಾ ಬಸ್‌ಗಳು ಸಂಚಾರ ಮಾಡಿವೆ. ಆದರೆ ಶನಿವಾರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಇವತ್ತು ಎರಡನೇ ಶನಿವಾರ ರಜಾದಿನವಾಗಿದ್ದು, ಲಕ್ಷದೀಪೋತ್ಸವಕ್ಕೆ ಅನೇಕ ಕಡೆಯಿಂದ ಪ್ರವಾಸಿಗರು ಬಂದಿದ್ದರು. ಮುಷ್ಕರದ ಬಿಸಿ ಅವರಿಗೂ ತಟ್ಟಿದೆ.

 

 

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...