ಬಂಟ್ವಾಳ: ಸರ್ವೀಸ್ ರಸ್ತೆಯಲ್ಲಿ ಸರಕಾರಿ ಖಾಸಗಿ ಬಸ್ ಗಳ ಸಂಚಾರಕ್ಕೆ ನಿರ್ಬಂಧ ಹೇರಿದ ಬಂಟ್ವಾಳ ಪೋಲಿಸರು.
ಟ್ರಾಫಿಕ್ ಜಾಮ್ ಸಮಸ್ಯೆ ಯ ನೆಪವೊಡ್ಟಿ ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಸೋಮವಾರದಿಂದ ನಿರ್ಬಂಧ ಹೇರಲಾಗಿದ್ದು , ಪ್ರಯಾಣಿಕರು ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.

ಪೊಳಲಿ ರಾಜರಾಜೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವಕ್ಕೆ ತೆರಳುವ ಭಕ್ತಾದಿಗಳಿಗೆ ಸಂಕಷ್ಟ ನೀಡಿದ ಪೋಲೀಸ್ ಇಲಾಖೆ.
ಹಲವು ವರ್ಷಗಳಿಂದ ಸರ್ವೀಸ್ ರಸ್ತೆಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಸೋಮವಾರದಿಂದ ಏಕಾಏಕಿ ಬಸ್ ಸಂಚಾರ ಮಾಡದಂತೆ ಬಂಟ್ವಾಳ ಟ್ರಾಫಿಕ್ ಪೋಲೀಸರು ತಡೆಯೊಡ್ಡಿ ನೇರವಾಗಿ ಅರ್ದ ಮೈಲು ದೂರವಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಕ್ಕೆ ಖಾಸಗಿ ಹಾಗೂ ಸರಕಾರಿ ಬಸ್ ಗಳನ್ನು ಕಳುಹಿಸಲಾಗುತ್ತಿದೆ.
ದೂರದೂರಿನಿಂದ ಬರುವ ಪ್ರಯಾಣಿಕರಿಗೆ ಯಾವುದೇ ಪೂರ್ವ ಮಾಹಿತಿಯಿಲ್ಲದ ಈ ಪೋಲೀಸರ ನಡೆಯಿಂದ ಸಾಕಷ್ಟು ತೊಂದರೆ ಅನುಭವಿಸದ್ದಾರೆ.
ಉರಿಯುವ ಬಿಸಿಲಿಗೆ ವೃದ್ದರು, ಮಕ್ಕಳನ್ನು ಹಿಡಿದುಕೊಂಡು ತಾಯಂದಿರು ಅತ್ತ ಇತ್ತ ಅಲೆದಾಡುವ ರೀತಿ ನೋಡಿದರೆ ಕಲ್ಲು ಹೃದಯವೂ ಒಮ್ಮೆ ಕರಗುತ್ತದೆ.
ಪೊಳಲಿ ಬ್ರಹ್ಮಕಲಶೋತ್ಸವದ ಈ ಸಂದರ್ಭದಲ್ಲಿ ಊರ ಪರ ಊರ ಭಕ್ತರು ಬಿಸಿರೋಡ್ ಗೆ ಬಂದು ಬಸ್ ಬದಲು ಮಾಡಿ ಹೋಗುವ ಸಂದರ್ಭದಲ್ಲಿ ಇವರಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಅವರು ದೂರಿಕೊಂಡಿದ್ದಾರೆ.
ಇದು ಪೋಲೀಸರಿಗೆ ಸುಲಭವಾಗಲು ಮಾಡಿದ್ದು ಬಿಟ್ಟರೆ ಪ್ರಯಾಣಿಕರಿಗೆ ಇದರಿಂದ ತೊಂದರೆ ಯಾಗುತ್ತಿದೆ ಎಂದು ಪ್ರಯಾಣಿಕ ನೋರ್ವ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಾರ್ವಜನಿಕರು ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರು ಈ ಬಗ್ಗೆ ಮನವಿ ಮಾಡಿಕೊಂಡರು ಸಂಬಂಧಿಸಿದ ಅಧಿಕಾರಿಗಳು ಇದು ಮುಂದಿನ ದಿನಗಳಲ್ಲಿ ಬಿಸಿರೋಡ್ ಬದಲಾವಣೆ ಮಾಡುವ ದೀರ್ಘಕಾಲದ ಚಿಂತನೆ , ಜನ ಹೊಂದಿಕೊಂಡು ಹೋಗಬೇಕು ಎಂದು ಹೇಳಿ ಮೌನವಾಗಿದ್ದಾರೆ.
ಇಂದು ಬಿಸಿರೋಡ್ ಸರ್ವೀಸ್ ರಸ್ತೆಯಲ್ಲಿ ಬ್ಯಾನರ್ ಒಂದನ್ನು ಸಂಚಾರಿ ಪೋಲೀಸ್ ಠಾಣೆ ಹಾಕಿದೆ. ಸರ್ವೀಸ್ ರಸ್ತೆಯಲ್ಲಿ ಬಸ್ ಬರುವುದಿಲ್ಲ , ಕೆ.ಎಸ್.ಆರ್.ಟಿ.ಸಿ.ಬಳಿ ಪ್ರಯಾಣಿಕರು ಹೋಗಬೇಕು ಎಂಬ ಬ್ಯಾನರ್ ಹಾಕಲಾಗಿದೆ.
ಕಳೆದ ಮೂರು ದಿನಗಳಿಂದ ಜನ ಸುತ್ತಾಡಿ ಸುಸ್ತಾಗಿದ್ದಾರೆ.
ತಾಲೂಕು ಪಂಚಾಯತ್ ನಿಂದ ಹಿಡಿದು ಎಲ್ಲಾ ಕಚೇರಿಗಳು ಸರ್ವೀಸ್ ರಸ್ತೆಯಲ್ಲಿ ಹಿಂದೆ ಬಸ್ ನಿಲುಗಡೆಯಾಗುತ್ತಿದ್ದ ಸ್ಥಳ ದಲ್ಲಿ ಇರುವುದರಿಂದ ಜನರಿಗೆ ಅನುಕೂಲವಾಗುತ್ತಿತ್ತು.
ಜನರಿಗೆ ತೊಂದರೆಯಾಗುವ ಈ ಯೋಜನೆ ಯಾಕೆ ಬೇಕು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಯಾದರೆ ಅಲ್ಲಿ ಪೋಲೀಸರ ನೇಮಕಮಾಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಾಗಿತ್ತು ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಜನರ ತೊಂದರೆ ಯಾಗುವ ಈ ವ್ಯವಸ್ಥೆ ಗಳನ್ನು ಬದಲಾಯಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.