ಚಿತ್ರ: ಸದಾಶಿವ ಕೈಕಂಬ

ಬಂಟ್ವಾಳ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕರೆಗೆ ಓಗೊಟ್ಟು ಸ್ತಬ್ಧ ವಾದ ಬಂಟ್ವಾಳ.




ಜಗತ್ತಿನ ನಿದ್ದೆಗೆಡಿಸಿದ ಡೆಡ್ಲಿ ವೈರಸ್ ಕೊರೊನೊ ವನ್ನು ತಡೆಗಟ್ಟುವ ಸಲುವಾಗಿ ಮಾ.22 ರಂದು ಆದಿತ್ಯವಾರ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯ ವರಗೆ ಜನತಾಕರ್ಪ್ಯೂ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು.
ಈ ಕರೆಯನ್ನು ಜನತೆ ಸ್ವೀಕರಿಸಿ ಮನೆಯಿಂದ ಹೊರಬರದೆ ಜಾಗೃತಿ ಗಾಗಿ ಕೈಜೋಡಿಸಿದರು.
ಬೆಳಿಗ್ಗೆ ಯಾದ ತಕ್ಷಣ ಬ್ಯೂಸಿಯಾಗುತ್ತಿದ್ದ ಬಿಸಿರೋಡು ಪೇಟೆ ಜನರಿಲ್ಲದೆ ಸೊರಗುತ್ತಿತ್ತು.
ಮುಂಜಾನೆಯೇ ರಸ್ತೆಗಿಳಿಯುವ ಅಟೋ ರಿಕ್ಷಾ ಗಳು ಮನೆಯಿಂದ ಗೇಟ್ ದಾಟಿಲ್ಲ, ಖಾಸಗಿ ಬಸ್ ಗಳು ರಸ್ತೆಗಿಳಿಯುವ ಸಾಹಸ ಮಾಡಿಲ್ಲ. ಸ್ವಯಂಪ್ರೇರಿತ ರಾಗಿ ಪ್ರತಿಯೊಬ್ಬರು ಮನೆಯಲ್ಲಿದ್ದು ಮೋದಿಯವರ ಜನತಾಕರ್ಪ್ಯೂ ಗೆ ಬೆಂಬಲ ನೀಡಿ ಪಾಲಿಸಿದರು.
ರಸ್ತೆಯ ಲ್ಲಿ ಬೆರಳೆಣಿಕೆಯಲ್ಲಿ ಪೋಲಿಸರು ಅತ್ತಿಂದಿತ್ತ ಓಡಾಟ ನಡೆಸುವುದು ಬಿಟ್ಟರೆ ಉಳಿದಂತೆ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಅನ್ನುತ್ತಿತ್ತು.ಎಲ್ಲಾ ಅಂಗಡಿಗಳು ಶಟರ್ ಎಳೆದು ಬೀಗ ಹಾಕಲಾಗಿತ್ತು.
ಸಂಘಟನೆಗಳು ಕರೆಕೊಡುವ ಬಂದ್ ಗಳಿಗಿಂತ ಇದು ವಿಭಿನ್ನವಾಗಿ ಕಾಣುತ್ತಿತ್ತು.
ಎರಡು ದಿನಗಳ ಮುಂಚಿತವಾಗಿ ಜನತಾಕರ್ಪ್ಯೂ ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಒಂದು ವಾರಗಳಿಗೆ ಮನೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಶನಿವಾರ ರಾತ್ರಿವೇಳೆ ಖರೀದಿಸುವ ಭರಾಟೆ ಕಂಡು ಬಂದಿತ್ತು.
ಅಂತೂ ಮಹಾಮಾರಿ ಕೊರೊನೊ ವೈರಸ್ ಹೊಡೆದು ಓಡಿಸಲು ಪ್ರಧಾನಿ ಜೊತೆಗೆ ಎಲ್ಲರೂ ಕೈಜೋಡಿಸಿದಂತೆ ಭಾಸವಾಗುತ್ತಿದೆ.
ಭಾರತ ಕೊರೊನೊ ದಿಂದ ಮುಕ್ತಿಯಾಗಲಿ ಎಂಬುದೇ ನಮ್ಮ ನಿಮ್ಮ ಪ್ರಾರ್ಥನೆ ಯಾಗಲಿ…

