ಬಿ.ಸಿ.ರೋಡ್ : ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವೇದಿಕೆಯಲ್ಲಿಯೇ ತಾಯಿಗೆ ಮಡಿಲು ತುಂಬಿಸಿ ನಂತರ ತಾಯಿ ಹಾಗೂ ಪುಟ್ಟಕೃಷ್ಣನಿಗೆ ಮುತೈದರಿಂದ ಆರತಿ ಬೆಳಗಸಿ ಬಾಲಕೃಷ್ಣನನ್ನು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಿ ಮಗುವನ್ನು ಮಲಗಿಸಿದ ಕಾರ್ಯಕ್ರಮ ಬಿ.ಸಿ.ರೋಡಿನ ಅಜ್ಜಿಬೆಟ್ಟು ಅಕ್ಕಮಹಾದೇವಿ ಶಿಶು ಮಂದಿರದ ಸದಸ್ಯರಿಂದ ನಡೆಯಿತು.


ಶುಕ್ರವಾರ ಅಜ್ಜಿಬೆಟ್ಟು ಶಾಲಾ ಮೈದಾನದಲ್ಲಿ ಸ್ನೇಹಾಂಜಲಿ ಸೇವಾ ಸಂಘದ ವತಿಯಿಂದ ೨೭ನೇ ಮೊಸರು ಕುಡಿಕೆ ಉತ್ಸವವು ಬೆಳಿಗ್ಗೆ ಉದ್ಘಾಟನಾ ಸಮಾರಂಭದ ನಂತರ ಶಿಶು ಮಂದಿರದ ೩ ವರ್ಷದಿಂದ ೫ ವರ್ಷದೊಳಗಿನ ಪುಟಾಣಿಗಳಿಂದ ಕೃಷ್ಣನ ಭಜನೆ, ಈ ದಿನದ ಪಂಚಾಂಗ, ಕಬೀರ ದ್ಯೋಹ, ಅಮೃತ ವಚನ, ಸರ್ವಜ್ಞನ ವಚನ, ಮಂಕುತಿಮ್ಮ ಕಗ್ಗ, ೧೫ ತಿಥಿಗಳ ಹೆಸರು ಹಾಗೂ ಕೃಷ್ಣನ ಹಾಡಿಗೆ ಕುಣಿತ ಹೀಗೆ ವಿವಿಧ ಶೈಲಿಯಲ್ಲಿ ಕಾರ್ಯಕ್ರಮ ನಡೆಯಿತು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಶುಮಂದಿರದ ಶಿಕ್ಷಕಿಯರಾದ ಶಶಿಪ್ರಭಾ, ನೀತಾ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕಾರ್ಯಕ್ರಮವನ್ನು ಅಜ್ಜಿಬೆಟ್ಟು ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಕುಶಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೃಷಿಕ ಮೋಹನ ಪೂಜಾರಿ ಉಪಸ್ಥಿತರಿದ್ದರು. ಗೌರವಾದ್ಯಕ್ಷ ಪ್ರಮೋದ್ ಕುಮಾರ್, ಅಧ್ಯಕ್ಷ ಉದಯ ಅಮೀನ್, ಕಾರ್ಯದರ್ಶಿ ಜಯಂತ ಅಗ್ರಬೈಲು, ಕೋಶಾಧಿಕಾರಿ ನಿತಿನ್ ಮಿತ್ತಬೈಲು, ಬೇಬಿ ಕುಂದರ್, ನಾಗೇಶ್ ಅಜ್ಜಿಬೆಟ್ಟು, ರಾಜೇಶ್ ಅಜ್ಜಿಬೆಟ್ಟು, ಲಕ್ಷ್ಮಣ ಅಗ್ರಬೈಲು ಕಾರ್ಯಕ್ರಮಕ್ಕೆ ಸಹಕರಿಸಿದ್ದರು