Monday, February 2, 2026

ಮಳೆಹಾನಿ ಪ್ರದೇಶಗಳಿಗೆ ಕೋಟ ಭೇಟಿ

ಬಂಟ್ವಾಳ: ಮಳೆ, ಗಾಳಿ, ನೆರೆಯ ಪ್ರಾಕೃತಿಕ ವಿಕೋಪ ದ ಕಾರಣದಿಂದ ಆಗಿರುವ ಸಮಸ್ಯೆಯಿಂದ ಯಾರೂ ಎದೆಗುಂದಬೇಕಾಗಿಲ್ಲ, ಸರ್ಕಾರವೇ ನಿಮ್ಮ ಜೊತೆಯಲ್ಲಿದ್ದು ಅಗತ್ಯ ನೆರವು ನೀಡಲಿದೆ. ಪರಿಹಾರಕಾರ್ಯಗಳಿಗರ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.


ಬಂಟ್ವಾಳ ತಾಲೂಕಿನ ವಿವಿಧ ನೆರೆ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಶಾಸಕರ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಸಕರೂ ತಮ್ಮ ತಮ್ಮ ಕ್ಷೇತ್ರ ಗಳಲ್ಲಿ ಅಗತ್ಯ ಪರಿಹಾರ ಕ್ರಮಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಯವರ ಮಾರ್ಗದರ್ಶನ ದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೂ ರಾತ್ರಿ ಹಗಲು ಶ್ರಮವಹಿಸುತ್ತಿದ್ದು, ಸೂಕ್ತರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದ ಅವರು, ಸಂತ್ರಸ್ತರಿಗೆ ಸ್ಥಳದಲ್ಲೇ ಅಗತ್ಯ ನೆರವು ಒದಗಿಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 543 ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ಗರಿಷ್ಠ ಹಾನಿ ವರದಿಯಾಗಿದೆ ಎಂದ ಅವರು, ಅಪಾರ ಕೃಷಿ ಹಾಗೂ ಜಿಲ್ಲೆಯ ಹೆದ್ದಾರಿ, ಜಿ.ಪಂ. ಹಾಗೂ ಗ್ರಾಮಗಳ ರಸ್ತೆಗಳಿಗೆ ಹಾನಿಯಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿ‌ಂದ 3000 ಕೋಟಿಮಳೆಹಾನಿ ಪರಿಹಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇರಿಸಲಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಮುಖರಾದ ದೇವದಾಸ್ ಶೆಟ್ಟಿ, ಪ್ರಭಾಕರ ಪ್ರಭು ಮತ್ತಿತರರಿದ್ದರು.

More from the blog

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್ : ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ...

ಬಿ.ಸಿ.ರೋಡ್ : ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ:  ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಹಾಕಾಳಿಬೆಟ್ಟು ಮೈದಾನದಲ್ಲಿ ಭಾನುವಾರ ಸಂಜೆ ಹಿಂದು ಸಂಗಮ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶಂಖ, ಕಲಶ, ಭಾರತಮಾತೆಯ ಭಾವಚಿತ್ರದ ವಾಹನ, ವೀರ ಪುರುಷರ ವೇಷ, ಚೆಂಡೆ,...

ಬಂಟ್ವಾಳ : ಮನೆಗೆ ಆಕಸ್ಮಿಕ ಬೆಂಕಿ – ರಸ್ತೆಯಿಲ್ಲದೇ ಅಗ್ನಿಶಾಮಕ ಸಿಬ್ಬಂದಿಗಳ ಪರದಾಟ..

ಬಂಟ್ವಾಳ: ಗೂಡಿನ ಬಳಿಯ ಬಳಕ ಎಂಬಲ್ಲಿ ಮನೆಗೆ ಸೋಮವಾರ ಬೆಳಗ್ಗೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸ್ಥಳಕ್ಕೆ ಬಂಟ್ವಾಳದ ಅಗ್ನಿಶಾಮಕದ ಸಿಬ್ಬಂದಿ ಆಗಮಿಸಲು ಪರದಾಟ ನಡೆಸಿದ ಘಟನೆ ನಡೆದಿದೆ. ಚಾರ್ಲಿ ಡಿಸೋಜಾ ಎಂಬವರಿಗೆ ಸೇರಿದ ಬಾಡಿಗೆ...

ಕೇಂದ್ರ ಬಜೆಟ್ 2026-27: ಸರ್ವೋದಯದ ಸಕಾರಾತ್ಮಕ ಬಜೆಟ್..

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ನ್ನು ಮಂಡಿಸಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. "ವಿಕಸಿತ ಭಾರತ" ದ ಮಹಾತ್ವಾಕಾಂಕ್ಷೆಯನ್ನು...