ಯಕ್ಷಗಾನ ಕಲಾವಿದರು, ಕಾರ್ಮಿಕರು, ಅರ್ಚಕರು, ನೌಕಕರರಿಗೆ ವೇತನ ನೀಡುವ ಆದೇಶ ಹೊರಡಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ.
ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನಡೆಯುತ್ತಿರುವ ಯಕ್ಷಗಾನ ಮೇಳಗಳು ಪ್ರದರ್ಶನ ವನ್ನು ನಿಲ್ಲಿಸಿದ್ದು, ಅಲ್ಲಿ ದುಡಿಯುವ ಕಲಾವಿದರು, ಕಾರ್ಮಿಕರಿಗೆ ಪ್ರದರ್ಶನ ಕಡಿತಗೊಂಡ ಹಿನ್ನೆಲೆಯಲ್ಲಿ ಸಂಬಳವನ್ನು ಕಡಿತಮಾಡಿದ್ದಾರೆ. ಆರ್ಥಿಕ ವಾಗಿ ಸ್ಥಿತಿವಂತರಲ್ಲದೆ ಕಲಾವಿದರಿಗೆ ಕಾರ್ಮಿಕ ರಿಗೆ ಬದುಕು ನಡೆಸಲು ಸಾದ್ಯವಿಲ್ಲ ದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅವರು ಮನವಿ ಮಾಡಿದ್ದರು.ದೇವಾಲಯಗಳು ಮುಚ್ಚಿದ್ದರಿಂದ ಅರ್ಚಕರು , ಸಿಬ್ಬಂದಿ ಗಳು ನಮಗೆ ಕಷ್ಟ ಗಳಿವೆ ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಮ್ಮ ದೇವಾಲಯಗಳ ಮೂಲಕ ನಡೆಯುವ ಯಕ್ಷಗಾನ ಕಲಾವಿದರಿಗೆ , ಕಾರ್ಮಿಕ ರಿಗೆ, ಅರ್ಚರಿಗೆ, ಸಿಬ್ಬಂದಿ ಗಳಿಗೆ ಕೋವಿಡ್ 19 ಹಿನ್ನೆಲೆಯಲ್ಲಿ ಅವರ ನಿಗದಿತ ಸಂಬಳವನ್ನು ದೇವಸ್ಥಾನದ ಮೂಲಕ ಯಾವುದೇ ಕಡಿತವಿಲ್ಲದೆ ನೀಡಲು ಆದೇಶ ಮಾಡಿದ್ದಾರೆ.


