ಬಂಟ್ವಾಳ: ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರದಲ್ಲಿ ರಾಜ್ಯದ ನೂತನ ಸಂಪುಟದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಥಮವಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಿದ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಬಂಟ್ವಾಳ ಬಿಜೆಪಿ ವತಿಯಿಂದ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.


ಅದಕ್ಕೂ ಮೊದಲು ಮಾಣಿ ಜಂಕ್ಸನಲ್ಲಿ ಹಾಗೂ ಕಲ್ಲಡ್ಕ ಪೇಟೆಯಲ್ಲಿ ಕಾರ್ಯಕರ್ತರು ಸಾಲು ಹೊದಿಸಿ ಸ್ವಾಗತಿಸಿದರು, ಹಾಗೂ ಜೈಕಾರ ಕೂಗಿದರು.
ಸಿಹಿ ತಿಂಡಿ ತಿನಿಸು ವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ , ಎ.ಗೋವಿಂದ ಪ್ರಭು,ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ , ಬಿಜೆಪಿ ಪ್ರಮುಖರಾದ ರಮಾನಾಥ ರಾಯಿ,ಪ್ರಕಾಶ್ ಅಂಚನ್,ರಂಜಿತ್ ಮೈರಾ,ಪ್ರಮೋದ್ ಅಜ್ಜಿಬೆಟ್ಟು,ಗೋಪಾಲ ಸುವರ್ಣ,ಸುರೇಶ್ ನರಿಕೊಂಬು,ಧನಂಜಯ ಶೆಟ್ಟಿ ಸರಪಾಡಿ,ಯಶೋಧರ ಕರ್ಬೆಟ್ಟು,ಸುದರ್ಶನ್ ಬಜ,ಮಹಾಬಲ ಶೆಟ್ಟಿ ,ಪುರುಷೋತ್ತಮ ಶೆಟ್ಟಿ ವಾಮದಪದವು,ಖಲೀಲ್ , ಪ್ರವೀಣ್ ಗಟ್ಟಿ, ದಿನೇಶ್ ದಂಬೆದಾರ್,ಉಮೇಶ್ ಅರಳ,ವಿದ್ಯಾವತಿ ಅಜ್ಜಿಬೆಟ್ಟು,ಗಣೇಶ್ ದಾಸ್,ಚಂದ್ರಶೇಖರ್ ವಾಮದಪದವು,ಯತಿನ್ ಶೆಟ್ಟಿ ,ಕಾರ್ತಿಕ್ ಬಳ್ಳಾಲ್,ಪ್ರದೀಪ್ ಅಜ್ಜಿಬೆಟ್ಟು,ಲೋಹಿತ್ ಕೊಳ್ನಾಡು,ಗುರುದತ್ ನಾಯಕ್,ಪ್ರತೀಶ್ ಅಜ್ಜಿಬೆಟ್ಟು,ಮನೋಜ್ ಕೋಟ್ಯಾನ್ ಮತ್ತು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.