Thursday, June 26, 2025

ರಶೀದ್ ಬಿಸಿರೋಡು ಅವರ ಕಂಠ ಸ್ವರದಲ್ಲಿ ಹಾಡಿದ ಕೊರಗಜ್ಜನ ಭಕ್ತಿ ಗೀತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್

ಕಾರಣೀಕ ದೈವ ಶ್ರೀ ಕೊರಗಜ್ಜ ನ ಬಗ್ಗೆ ಪ್ರಸ್ತುತ ದಿನಗಳಲ್ಲಿ ಯಾರಿಗಿಲ್ಲ ಭಯ ಭಕ್ತಿ.

ಬೇರೆ ಬೇರೆ ರೀತಿಯಲ್ಲಿ ಸಂಗೀತ ಕಾರರು ಹೊಸ ರೂಪದಲ್ಲಿ ಹಾಡಿದ ಕೊರಗಜ್ಜನ ಹಾಡು ರಿಲೀಸ್ ಕೂಡ ಆಗಿದೆ.

ಸಣ್ಣ ಬಾಲಕನಿಂದ ಹಿಡಿದು ಬಹುತೇಕ ಎಲ್ಲಾ ಸಿಂಗರ್ ಗಳು ಕೊರಗಜ್ಜನ ಹಾಡು ಹಾಡಿ ಪ್ರಸಿದ್ದಿ ಪಡೆದಿದ್ದಾರೆ.

ಆದರೆ ಇಲ್ಲೊಬ್ಬರು ಮುಸ್ಲಿಂ ಸಮುದಾಯದ ಯುವಕ ಕೊರಗಜ್ಜನ ಹಾಡಿನ ಬಗ್ಗೆ ಅಪಾರವಾದ ಗೌರವ ಹಾಗೂ ಇಷ್ಟ ಪಟ್ಟು ಹಾಡು ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿದೆ.

ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ರಶೀದ್ ಎನ್ ಅವರು ಹಾಡುಗಾರಿಕೆಯ ಜೊತೆಗೆ ಕಲಾವಿದ ಕೂಡ ಹೌದು.

ರಶೀದ್ ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ.

ಅವರು ಈ ಒಂದು ಹಾಡು ಅಲ್ಲದೆ ಅನೇಕ ಹಾಡಿನ ಮೂಲಕ ಜನರ ಮನಸ್ಸು ಗೆದ್ದವರು.

ಇತ್ತೀಚಿನ ದಿನಗಳಲ್ಲಿ ಸೌಹಾರ್ದ ದತೆ ಕೊರತೆಯೂ ಸೇರಿದಂತೆ ಮನುಷ್ಯ ರ ಜೊತೆ ಪ್ರೀತಿ ವಿಶ್ವಾಸ ಬೇಕು ಎಂಬ ನಿಟ್ಟಿನಲ್ಲಿ ನಾನು ಇಷ್ಟವಾದ ಹಾಡನ್ನು ಹಾಡಿದ್ದೇನೆ.

ನನಗೆ ಕೊರಗಜ್ಜನ ಹಾಡು ಅಂದರೆ ಇನ್ನಿಲ್ಲದ ಪ್ರೀತಿ.

ಹಾಗಾಗಿ ಹಾಡು ಹಾಡಿದ್ದೇನೆ. ಈ ಹಾಡು ಹಾಡಿದ ನನಗೆ ನನ್ನ ಎಲ್ಲಾ ಸಮುದಾಯ ದ ಸ್ನೇಹಿತರು ವೈಯಕ್ತಿಕ ಸ್ಟೇಟ್ಸ್ ನಲ್ಲಿ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.

ಇದಕ್ಕಿಂತ ದೊಡ್ಡ ಗೌರವ ನನಗೆ ಬೇಡ…

ನನ್ನ ಹಾಡಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ನೀಡುತ್ತೇನೆ.

*ರಶೀದ್ ಎನ್*

More from the blog

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...