Friday, July 11, 2025

ದಿ.ಕೊಂಬಿಲ ನಾರಾಯಣ ಶೆಟ್ಟಿ ಸಂಸ್ಮರಣೆ ಮತ್ತು 38ನೇ ವರ್ಷದ ತಾಳಮದ್ದಲೆ ಕೂಟ

ಯಕ್ಷಗಾನ ಸಮಿತಿ ಮಾಣಿ ಮತ್ತು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿ.ಕೊಂಬಿಲ ನಾರಾಯಣ ಶೆಟ್ಟಿ ಸಂಸ್ಮರಣೆ ಮತ್ತು 38ನೇ ವರ್ಷದ ತಾಳಮದ್ದಲೆ ಕೂಟ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಜರಗಿತು.
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಲೆಕ್ಕಪರಿಶೋಧಕ ಕಾರ್ಕಳ ಶಿವಾನಂದ ಪೈ, ಕೊಂಬಿಲ ಯತಿರಾಜ್ ಶೆಟ್ಟಿ ಭಾಗವಹಿಸಿದ್ದರು.
ಬೆಂಗಳೂರಿನ ಹೈಕೋರ್ಟ್ ವಕೀಲರಾದ ಸುಧಾಕರ ಪೈ, ಮಾಣಿ ಉಪಸ್ಥಿತರಿದ್ದರು.
ಯಕ್ಷಗಾನ ಸಮಿತಿಯ ಅಧ್ಯಕ್ಷ ಮೋಹನ್ ಪೈ ಸ್ವಾಗತಿಸಿದರು. ಸಮಿತಿಯ ಸದಸ್ಯ ಕೆ.ವಿ.ರಮಣ್ ಸಂಸ್ಮರಣಾ ಮಾತುಗಳನ್ನಾಡಿದರು.
ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಆಳ್ವ, ಕೊಡಾಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಾಮ ಪರಂಧಾಮ ತಾಳಮದ್ದಲೆ ನಡೆಯಿತು.

More from the blog

ಕುಂಜರ್ಕಳದ ತಡೆಗೋಡೆ, ಬಸ್ಸು ತಂಗುದಾಣ, ಹೈಮಾಸ್ಟ್ ದೀಪ ಉದ್ಘಾಟಿಸಿದ ಯು.ಟಿ.ಖಾದರ್..

ಬಂಟ್ವಾಳ: ಶಾಸಕರ ಅನುದಾನದಿಂದ ನಿರ್ಮಾಣಗೊಂಡ ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, ೧೦ನೇ ಮೈಲುಕಲ್ಲು ಬಳಿ ಬಸ್ಸು ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳು ಸಮಸ್ಯೆ : ಜು.14ಕ್ಕೆ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ..

ಬಂಟ್ವಾಳ :ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ದುರಡಳಿತ ನೀತಿಯಿಂದಾಗಿ ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಕ್ರತಕ ಅಭಾವ ಸ್ರಷ್ಟಿಸಿರುವುದರಿಂದ ತೀವ್ರ ಸಮಸ್ಯೆಯಿಂದ ಬಡವರು ನಿರ್ಮಿಸುತ್ತಿರುವ ಸಾವಿರಾರು ಮನೆಗಳು...

ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆ : ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಶಾಸಕ ರಾಜೇಶ್ ನಾಯ್ಕ್ ನಿರ್ದೇಶನ..

ಬಂಟ್ವಾಳ: ದ.ಕ.ಜಿಲ್ಲೆಗೆ ಮಂಜೂರಾಗಿರುವ ಏಕೈಕ ಬ್ರಹ್ಮ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನೂತನ ಸುಸಜ್ಜಿತ ‌ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು,ವಿದ್ಯಾರ್ಥಿಗಳ ಅನುಕೂಲತೆಯ ದೃಷ್ಟಿಯಿಂದ ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಂಟ್ವಾಳ...