Thursday, February 13, 2025

ಕೊಂಕಣ್ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ ಆಡಳಿತ ನಿರ್ದೇಶಕರಿಗೆ ಮನವಿ ಸಲ್ಲಿಕೆ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯ ನಿಯೋಗವು ಇಂದಿಲ್ಲಿ ಬುಧವಾರ ನವಮುಂಬಯಿ ಬೇಲಾಪುರ ಅಲ್ಲಿನ ಕೊಂಕಣ್ ಭವನಕ್ಕೆ ಭೇಟಿ ನೀಡಿ ಕೊಂಕಣ್ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ (ಕೆಆರ್‌ಸಿಎಲ್) ಆಡಳಿತ ನಿರ್ದೇಶಕ ಸಂಜಯ್ ಗುಪ್ತ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳಿಗಾಗಿ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಿತು.

ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಗೌರವಾಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್ ಪದಾಧಿಕಾರಿಗಳನ್ನು ಒಳಗೊಂಡು ಮುಂಬಯಿ ಮಂಗಳೂರು ಪ್ರಯಾಣಿಕರಿಗೆ ಸರ್ವೋತ್ತಮ ಸೇವೆ ಒದಗಿಸುವರೇ ಮನವಿ ಸಲ್ಲಿಸಿತು. ಈ ಸಂದರ್ಭ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ ಪಿ.ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಎಂ.ಸುವರ್ಣ, ಜಯ ಎ.ಶೆಟ್ಟಿ, ಕೆಆರ್‌ಸಿಎಲ್ ಪಿಆರ್‌ಒ ಗಿರೀಶ್ ಕರಂಡೇಕರ್ ಉಪಸ್ಥಿತರಿದ್ದರು.

ಮಂಗಳೂರು ಎಕ್ಸ್‌ಪ್ರೆಸ್ ಮತ್ತು ಮತ್ಸ್ಯಗಂಧ ರೈಲುಗಳನ್ನು ನೂತನ ತಂತ್ರಜ್ಞಾನ ಬಳಸಿ ವೇಗದಾಯಕ ಗೊಳಿಸುವಂತೆ, ಈ ರೈಲು ಮಾರ್ಗದಲ್ಲಿ ಸಂಚಾರಿಸುವ ರೈಲುಯಾನದಲ್ಲಿ ಲೂಟಿಕೋರರ ಮತ್ತು ಕಳ್ಳತನದ ಘಟನೆಗಳು ದಿನೇದಿನೇ ಹೆಚ್ಚಾಗುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿ ಅಪರಾಧಮುಕ್ತ ಯಾನಕ್ಕೆ ಮುಂಜಾಕರುಕತಾ ಕ್ರಮವಾಗಿಸಿ ಕೆಆರ್‌ಸಿಎಲ್ ಅತೀಯಾದ ಕಾಳಜಿ ವಹಿಸಿ ಸೂಕ್ಷ್ಮವಾದ ಜಾಗಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸುವಂತೆ, ಸಾಮಾನ್ಯ ಬೋಗಿಯ ಟಿಕೇಟು ಪಡೆದ ಪ್ರಯಾಣಿಕರು ಮೀಸಲು (ರಿಝರ್ವೇಶನ್) ಟಿಕೇಟು ಪಡೆದು ಪ್ರಯಾಣಿಸುವ ಭೋಗಿಗಳಲ್ಲಿ ಪ್ರಯಾಣಿಸದಂತೆ ಯಾ ಕನಿಷ್ಠ ರತ್ನಗಿರಿ ರೈಲು ನಿಲ್ದಾಣ ತನಕ ನುಗ್ಗದಂತೆ ಕ್ರಮಕೈಗೊಳ್ಳುವರೇ ಆರ್‌ಪಿಫ್ ಸಿಬ್ಬಂದಿ ನೇಮಕ ಮಾಡುವಂತೆ, ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮೂಲ್ಕಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಹಾಗೂ ಪ್ರಯಾಣಿಕರ ಅನುಕೂಲಕರ ಸೇವೆಯಾಗಿಸಿ ನೂತನ (ರೇಕ್)ಗಳ ಅಳವಡಿಕೆ ಇತ್ಯಾದಿಗಳ ಬಗ್ಗೆ ಮನವಿ ಸಲ್ಲಿಸಲಾಯಿತು.

ಸುಮಾರು ಒಂದುವರೆ ತಾಸುಗಳ ಸುದೀರ್ಘವಾದ ವಿಸ್ತೃತ ಚರ್ಚೆಯ ಬಳಿಕ ಸಂಜಯ್ ಗುಪ್ತ ಭರವಸೆಗಳನ್ನು ತ್ವತರಿತವಾಗಿ ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ರೈಲ್ವೇ ಯಾತ್ರಿ ಸಂಘದ ಈ ಬೇಡಿಕೆಗಳನ್ನು ಶೀಘ್ರವೇ ಪರಿಶೀಲಿಸಿ ಸೂಕ್ತವಾದ ಕ್ರಮಕೈಗೊಳ್ಳುತ್ತಾ ಪ್ರಯಾಣಿಕರ ನೆಮ್ಮದಿದಾಯಕ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಕೆಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದ ತಿಳಿಸಿದರು.



More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...