ವಿಟ್ಲ: ಸರಕಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಅನುದಾನ ಹಾಗೂ ಯೋಜನೆಗಳನ್ನು ಪರಿಶಿಷ್ಟ ಜಾತಿ ಪಂಗಡಗಳ ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಮೂಲಸೌಕರ್‍ಯಗಳಿಗಾಗಿ ಶೇ.25 ಅನುದಾನ ಕಡ್ಡಾಯವಾಗಿದ್ದು ಇದರ ಮಾಹಿತಿ ಪಡೆದು ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಿ ಸದ್ಬಳಕೆಗೆ ಸಹಕಾರಿಗಳಾಗಬೇಕೆಂದು ಪರಿಶಿಷ್ಟ ಜಾತಿ ಪಂಗಡದ ಜನರಿಗೆ ಕರೆ ನೀಡಿದರು.
ಅವರು ಕೊಳ್ನಾಡು ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೇತ್ರಾವತಿ ಸಭಾಂಗಣದಲ್ಲಿ, ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಆಡಳಿತದ ಗ್ರಾಮ ಗ್ರಾಮದ ಎಲ್ಲಾ ಪರಿಶಿಷ್ಟ ಜಾತಿ ಪಂಗಡ ಕಾಲನಿಗಳ ಮೂಲ ಸೌಕರ್ಯದ ಜೊತೆಗೆ ವೈಯಕ್ತಿಕ ಸೌಲಭ್ಯಗಳನ್ನು ವಿತರಿಸುವಲ್ಲಿ ಮುತುವರ್ಜಿ ವಹಿಸಿದೆ. ನಮ್ಮಲ್ಲಿ ಜಾಗೃತಿ ಮೂಡಿಸಲು ಅಹವಾಲುಗಳನ್ನು ಕೇಳುವ ಉದ್ದೇಶದಿಂದ ವಿಶೇಷ ಗ್ರಾಮ ಸಭೆ ಕರೆಯಲಾಗಿದೆ ಎಂದ ಅವರು ಪಂಚಾಯಿತಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಸಾದ್‌ರವರು ಇಲಾಖಾ ಸೌಲಭ್ಯಗಳ ಕೈಪಿಡಿ ವಿತರಿಸಿ ಮಾತನಾಡಿ ನಮ್ಮ ಇಲಾಖಾ ವ್ಯಾಪ್ತಿಯಲ್ಲಿರುವ ಉಚಿತ ಶಿಕ್ಷಣ ವ್ಯವಸ್ಥೆಗಳಾದ ವಸತಿ ಶಾಲೆಗಳ ಪಡೆಯುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿರುವ ಸ್ಕಾಲರ್‌ಶಿಪ್ ಸೌಲಭ್ಯದ ಪ್ರಯೋಜನ ಪಡೆಯಿರಿ ಹಾಗೂ ಈಗ ಎಲ್ಲಾ ಇಲಾಖೆಗಳು ಪ್ರತ್ಯೇಕ 25% ಮೀಸಲು ಅನುದಾನ ಅನುಷ್ಠಾನ ತೋರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಗ್ರಾಮಸ್ಥರು ಕುಳಾಲು ಪ.ಜಾತಿ ಕಾಲನಿಗೆ ಕುಡಿಯುವ ನೀರು ಕಡಪಿಕೇರಿ ಕಾಲುದಾರಿ ಪೆರ್ಲದಬೈಲು ರಸ್ತೆ ಹಾಗೂ ಕಾಡುಮಠ ಹಾಗೂ ಮಂಕುಡೆಯಲ್ಲಿ ಹೊಸ ವಸತಿ ಯೋಜನೆ ಪಡೆಯಲು ನಿವೇಶನಗಳು ಖಾಸಗಿಯವರ ಹೆಸರಿನಲ್ಲಿರುವುದರ ಬಗ್ಗೆ ಗಮನ ಸೆಳೆದಾಗ ಅಂತವರಿಗೆ ದುರಸ್ತಿ ಅನುದಾನ ಅಗತ್ಯವಿದ್ದಲ್ಲಿ ಪಂಚಾಯತಿನಿಂದ ಆದ್ಯತೆ ನೆಲೆಯಲ್ಲಿ ನೀಡಲಾಗುವುದು. ಹೊಸ ಮನೆ ಬೇಕಾದಲ್ಲಿ ಪಂಚಾಯಿತಿ ಮೀಸಲಿರುವ ಜಾಗದಲ್ಲಿ ನಿವೇಶನ ಇಚ್ಚಿಸಿದಲ್ಲಿ ವಿತರಿಸಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು.
ವೇದಿಕೆಯಲ್ಲಿ ಪಂಚಾಯಿತಿ ಸದಸ್ಯರಾದ ಗುರುವಪ್ಪ ಮುಗೇರ, ಇಂದ್ರಾವತಿ, ವನಜಾ, ಪವಿತ್ರಪೂಂಜ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್‍ಯದರ್ಶಿ ಆಯಿಷಾಬಾನು ಸ್ವಾಗತಿಸಿ, ವಂದಿಸಿದರು.

