ಬೆಳ್ತಂಗಡಿ: ಕೊಕ್ಕಡದಲ್ಲಿ ನೀರಿನ ಟ್ಯಾಂಕರ್ ವೊಂದು ಪಲ್ಟಿಯಾಗಿ ಓರ್ವ ಕಾರ್ಮಿಕ ಟ್ಯಾಂಕರ್ ನ ಅಡಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

ಹಾವೇರಿ ನಿವಾಸಿಯಾಗಿರುವ ಸುರೇಶ್ ಮಲ್ಲಪ್ಪ ಹೊಸಮನಿ ಮೃತಪಟ್ಟ ಕಾರ್ಮಿಕ.
ಕೊಕ್ಕಡ ಗ್ರಾಮದ ಮೈಪಾಳದಲ್ಲಿ ವೆಂಟೆಡ್ ಡ್ಯಾಮಿನ ಕಾಮಗಾರಿ ನಡೆಯುತ್ತಿದ್ದು, ಸುರೇಶ್ ಮಲ್ಲಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರು. ಟ್ಯಾಂಕರ್ ನಲ್ಲಿ ನೀರು ತುಂಬಿಕೊಂಡು ಬರುತ್ತಿದ್ದ ವೇಳೆ ಚಾಲಕ ಸುರೇಶ ಅಜಾಗರೂಕತೆಯಿಂದ ಟ್ಯಾಂಕರ್ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಟ್ಯಾಂಕರ್ ಮಗುಚಿ ಬಿದ್ದಿದೆ. ಈ ವೇಳೆ ಟ್ಯಾಂಕರ್ ಅಡಿಗೆ ಸಿಲುಕಿದ ಸುರೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಂಜಪ್ಪ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ