ಬಂಟ್ವಾಳ: ಬಂಟ್ವಾಳ ತಾ| ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯದ ದತ್ತು ಪಡಕೊಂಡಿರುವ ಜನ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ವಾಹನ ಓಮ್ನಿ ಕಾರಿನ ಹಸ್ತಾಂತರ ಕಾರ್ಯಕ್ರಮ ಶಾಲೆಯಲ್ಲಿ ಜರಗಿತು.
ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್, ತಾ.ಪಂ.ಸದಸ್ಯೆ ಮಂಜುಳಾ ಸದಾನಂದ, ನಿವೃತ್ತ ಮುಖ್ಯ ಶಿಕ್ಷಕಿ ಪಾವನಾದೇವಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ ಕೊಲ, ಕೊಲ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕ ಸುಧೀರ್ ಜಿ., ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಚಂದಪ್ಪ, ಸದಸ್ಯರಾದ ಶಾಂತಾ ನಾಗರಾಜ್ ಭಟ್, ಸದಾನಂದ ಸೀತಾಳ, ಶ್ರೀನಿವಾಸ ಕೊಲ, ಜಯಲಕ್ಷಿ ,ರಾಮಚಂದ್ರ ಶೆಟ್ಟಿಗಾರ್, ಶರತ್ ಕೊಯಿಲ, ಲೋಕೇಶ್, ಗ್ರಾ.ಪಂ.ಸದಸ್ಯೆ ಕುಸುಮಾ, ಮುಖ್ಯಶಿಕ್ಷಕಿ ಮೇಬುಲ್ ಫೆರ್ನಾಂಡಿಸ್, ಶಿಕ್ಷಕ ವೃಂದ, ಮತ್ತಿತರರು ಉಪಸ್ಥಿತರಿದ್ದರು. ಧೈಹಿಕ ಶಿಕ್ಷಕಿ ಪಾಸ್ಕಲ್ಯ ಕಾರ್ಯಕ್ರಮ ನಿರೂಪಿಸಿದರು.
