ವಿಟ್ಲ: ಕಬಡ್ಡಿ ಕ್ರೀಡೆಯಲ್ಲಿ ನಮ್ಮ ದೇಶ ಉನ್ನತ ಸ್ಥಾನದಲ್ಲಿದೆ. ದೇಶದ ಕಬಡ್ಡಿ ಆಟವನ್ನು ನೋಡಿ ವಿದೇಶದಲ್ಲಿಯೂ ಕ್ರೀಡೆಗಳು ನಡೆಯುತ್ತಿದ್ದು, ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಕಬಡ್ಡಿ ಆಟಗಾರರು ಇಂದು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಹೇಳಿದರು.
ಅವರು ಕೊಡಂಗಾಯಿಯಲ್ಲಿ ವಿಟ್ಲ ಪಡ್ನೂರು ವಲಯ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಹಾಗೂ ಕೊಡಂಗಾಯಿ ಮೋರ್ನಿಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ರೊ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಮ್ಯಾಟ್ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಕ್ರೀಡೆಗಳ ಮೂಲಕ ಜಿಲ್ಲೆಯಲ್ಲಿ ಸೌಹಾರ್ದತೆಗೆ ನಾಂದಿ ಹಾಡುವ ಕಾರ್‍ಯ ನಡೆಯುತ್ತಿದೆ. ಕ್ರೀಡಾ ಚಟುವಟಿಕೆಗಳು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಯುವಕರು ದೇಶಕ್ಕೆ ಮಾದರಿ ಆಗಬೇಕು. ರಾಜಕೀಯಕ್ಕಾಗಿ ದೇವರ ಹೆಸರು ಹಾಳು ಮಾಡುತ್ತಿದ್ದಾರೆ. ಕಬಡ್ಡಿ ಮೂಲಕ ಉತ್ತಮ ಸಂದೇಶ ನೀಡುವ ಕಾರ್‍ಯ ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಮಮತಾ ಗಟ್ಟಿ, ಎಂ.ಎಸ್ ಮಹಮ್ಮದ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ಶೋಭಾ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಮಾಧವ ಮಾವೆ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ರಮಾನಾಥ ವಿಟ್ಲ, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ, ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಇಂಡಿಯನ್ ಗ್ಯಾಸ್ ಮಾಲಕ ಸತೀಶ್ ಕುಮಾರ್ ಆಳ್ವ, ಕಬಡ್ಡಿ ಪಂದ್ಯಾಟದ ಕಾರ್ಯಾಧ್ಯಕ್ಷ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್‍ಯದರ್ಶಿ ಸಂದೇಶ್ ಶೆಟ್ಟಿ ಬಿಕ್ನಾಜೆ, ಕೋಶಾಧಿಕಾರಿ ಶಾಹುಲ್ ಹಮೀದ್, ಕೆ.ಎಂ ಲತೀಫ್ ಪರ್ತಿಪ್ಪಾಡಿ, ಕೊಡಂಗಾಯಿ ಮೋರ್ನಿಂಗ್ ಸ್ಟಾರ್ ಅಧ್ಯಕ್ಷ ಅಝರುದ್ದೀನ್ ಅರಫ, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಎಸ್ ಶೆಟ್ಟಿ, ಸಿದ್ದೀಕ್ ಸರಾವು, ಮಹಮ್ಮದ್ ಶರೀಫ್ ಎಮ್ ಮೊದಲಾದವರು ಉಪಸ್ಥಿತರಿದ್ದರು. ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ಕಾರ್‍ಯಕ್ರಮ ನಿರೂಪಿಸಿದರು.

