ಮಾಣಿ ಗ್ರಾಮದ ಕೊಡಾಜೆ ಗಡಿಸ್ಥಳದಲ್ಲಿ ಶ್ರೀ ಗುಡ್ಡೆಚಾಮುಂಡಿ ಪಂಜುರ್ಲಿ ಮಲೆಕೊರತಿ ಗ್ರಾಮ ದೈವಗಳ ಕಾಲಾವಧಿ ದೊಂಪದಬಲಿ ನೇಮ ಜರಗಿತು.

ಮಾಣಿಗುತ್ತು ಚಾವಡಿಯಿಂದ ಶ್ರೀ ದೈವಗಳ ಭಂಡಾರ ಗಡಿಸ್ಥಳಕ್ಕೆ ಬಂದು, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಶ್ರೀ ದೈವಗಳ ನೇಮ ಸಂಪ್ರದಾಯದಂತೆ ನಡೆಯಿತು.
ಮಾಣಿಗುತ್ತು ಸಚಿನ್ ರೈ, ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಬನ್ನೂರುಗುತ್ತು ರಾಜ್ ಕಮಲ್ ಹೆಗ್ಡೆ, ಬದಿಗುಡ್ಡೆ ಜಗನ್ನಾಥ ಚೌಟ, ಕೊಡಾಜೆ-ಗಡಿಸ್ಥಳ ನಾರಾಯಣ ಆಳ್ವ, ಪಲ್ಲತ್ತಿಲ ವೆಂಕಪ್ಪ ಪೂಜಾರಿ, ಪಾದೆ ರಾಮ ಚಂದ್ರ ಪೂಜಾರಿ ಮತ್ತು ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
