Friday, February 14, 2025

ಕೆ.ಎನ್.ಆರ್.ಸಿ.ಕಂಪೆನಿ ಅಧಿಕಾರಿಗಳ ವಿರುದ್ದ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು..

ಬಂಟ್ವಾಳ: ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದು ನಷ್ಟ ಮಾಡಿದ್ದಾರೆ ಎಂದು ಖಾಸಗಿ ಕಂಪೆನಿ ಮೇಲೆ ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‌ರಾಷ್ಟ್ರೀಯ ಹೆದ್ದಾರಿ ಬಿಸಿರೋಡು- ಅಡ್ಡಹೊಳೆ ಚತುಷ್ಪತ ರಸ್ತೆಯ ಕಾಮಗಾರಿ ನಡೆಸುತ್ತಿರುವ ಕೆ.ಎನ್.ಆರ್‌.ಸಿ‌.ಕಂಪೆನಿಯ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಕಂಪನಿಯ ಅಧಿಕಾರಿಗಳಾದ ಪಿ.ಆರ್.ಒ.ನಂದಕುಮಾರ್ ಮತ್ತು ಸೈಟ್ ಇಂಜಿನಿಯರ್ ನಿತಿನ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.
‌‌‌ ಮೆಲ್ಕಾರ್ ಹೆದ್ದಾರಿ ಬದಿಯಲ್ಲಿ ಬಾಡಿಗೆಗೆ ಇದ್ದ ಹಳೇಯ ಸಂಚಾರ ಪೋಲೀಸ್ ಠಾಣೆಯ ಸುತ್ತ ಮಣ್ಣು ಅಗೆಯಲಾಗಿದೆ. ಅಬ್ದುಲ್ ಖಾದರ್ ಅವರ ಸೇರಿದ ಜಾಗ ಇದಾಗಿದ್ದು,ಇವರಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಜಾಗಕ್ಕೆ ಪ್ರವೇಶ ಮಾಡಿ ಸುಮಾರು ಒಂದು ತಿಂಗಳಿನಿಂದ ಅವೈಜ್ಞಾನಿಕವಾಗಿ ಮಣ್ಣು ಅಗೆಯಲಾಗಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಣ್ಣು ಅಗೆದು ನಷ್ಟ ಉಂಟು ಮಾಡಿದ ಕಂಪೆನಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ತಿಳಿಸಲಾಗಿದೆ.

More from the blog

ಡೆತ್ ನೋಟ್ ನೀಡಿದ ಮಹತ್ವದ ಸುಳಿವು: ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಡೆತ್ ನೊಟ್ ನೀಡಿದ ಸುಳಿವು ಸ್ನೇಹಿತರ ಪಾಲಿಗೆ ಯಮಸ್ವರೂಪಿಯಾದರೆ , ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬಹುದಾ? ..... ಕಳೆದ ಮೂರು ದಿನಗಳ ಹಿಂದೆ ನಡೆದ ಅವಿವಾಹಿತ ಯುವಕನ ಆತ್ಮಹತ್ಯೆ ಹಿಂದೆ ಲಕ್ಷಾಂತರ ರೂ ಹಣದ ವಹಿವಾಟಿನ...

ಮಾ.1 ರಿಂದ 7 ರ ವರೆಗೆ ಪೊಳಲಿಯಲ್ಲಿ ಶತಚಂಡಿಕಾಯಾಗ ಹಾಗೂ ದೊಡ್ಡರಂಗ ಪೂಜೆ

ಬಂಟ್ವಾಳ: ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ದಿಗಾಗಿ ಮಾ.1 ರಿಂದ ಮಾ.07 ರ ವರೆಗೆ ಪೊಳಲಿ ಶ್ರೀ ದುರ್ಗಾಪರಮೇಶ್ವರಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ...

ಫೆ.18. ರಿಂದ 22 ರವರೆಗೆ ಕುಪ್ಪೆಟ್ಟು ಬರ್ಕೆ ಪ್ರತಿಷ್ಠಾ ಮಹೋತ್ಸವ ಮತ್ತು ನೇಮ

ಶ್ರೀ ಕೊಡಮಣಿತ್ತಾಯ ,ಲೆಕ್ಕೆಸಿರಿ, ಮೈಸಂದಾಯ , ಹಿರಿಯಜ್ಜ, ಕುಪ್ಪೆಟ್ಟು ಪಂಜುರ್ಲಿ, ಮಂತ್ರಜಾವದೆ ,ಬಂಟ ಪಂಜುರ್ಲಿ ಮತ್ತು ಗಡುಪಾಡಿ ಜಾಗದ ಕಲ್ಲುರ್ಟಿ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಢಾ ಮಹೋತ್ಸವ ಮತ್ತು ನೇಮೋತ್ಸವ ಫೆ.18 ರಿಂದ...

ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮದ ಬಳಿಕ ಉದಯ ಪೂಜೆ, ನರಸಿಂಹ ಮಂಡಲ ಪೂಜೆ, ತುಲಾಭಾರ...