ಬಂಟ್ವಾಳ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ಕೆ .ಎಂ .ಎಫ್ ) ಕ್ಕೆ ಸಂಯೋಜನೆ ಗೊಂಡಿರುವ ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯು ಜುಲೈ 27 ರಂದು ಬೆಳಿಗ್ಗೆ 10 .30 ಕ್ಕೆ ಕೆ .ರವಿರಾಜ ಹೆಗ್ಡೆ ಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಹಾಲಿನ ಉತ್ಪಾದನೆ ಹೈನುಗಾರರು ನೀಡುತ್ತಿರುವ ಸಂದರ್ಭದಲ್ಲಿ ಹಾಲಿನ ಸಂಗ್ರಹಣೆ ಮಾಡುವುದು ಹೇಗೆ ಎಂಬ ಸವಾಲು ಗಳು ಒಕ್ಕೂಟದ ಮುಂದಿವೆ.
ಈ ವರ್ಷಾಂತ್ಯದಲ್ಲಿ 64 ಲಕ್ಷ ದಷ್ಟು ಹಾಲನ್ನು ಹುಡಿಯಾಗಿ ಮಾರ್ಪಾಡು ಮಾಡುವಷ್ಟು ಮಟ್ಟಕ್ಕೆ ಬೆಳೆದಿವೆ ಎಂದರೆ ಸಂಘ ಸ್ವಾವಲಂಬಿ ಯಾಗುತ್ತಾ ಮುಂದೆ ಸಾಗುತ್ತಿವೆ ಎಂದು ಹೇಳಲು ಸಂತೋಷ ಅಗುತ್ತಿದೆ ಎಂದು ಅವರು ಹೇಳಿದರು.
ಹಾಲು ಹಾಗೂ ಹಾಲಿನ ಇತರ ಉತ್ಪಾದನೆ ಯ ಮೂಲಕ ಮಾರುಕಟ್ಟೆ ಗೆ ಹೆಚ್ಚಿನ ಒತ್ತನ್ನು ಒಕ್ಕೂಟ ನೀಡಬೇಕಾಗಿದೆ.

816 ಕೋಟಿಯಷ್ಟು ವ್ಯವಹಾರ ನಡೆಸಿ, 6.99 ಕೋಟಿ ನಿವ್ವಳ ಲಾಭ ಗಳಿಸಿದೆ. ಗುಣಮಟ್ಟದ ಮೇಲೆ ಹಾಲಿನ ದರವನ್ನು ಕಂಡುಕೊಂಡಿದ್ದೇವೆ. ಹೊರ ಜಿಲ್ಲೆ ಹಾಗೂ ರಾಜ್ಯದಲ್ಲಿ ಹಾಲಿನ ಬೇಡಿಕೆ ಬೇಕಾಗುವಷ್ಟು ಇದೆ ಹೊಂದಿಕೊಂಡು ಹೋಗುವ ದಾರಿಯಲ್ಲಿ ನಡೆಯುತ್ತಿದ್ದೇವೆ.
ಹೊಸಹೊಸ ಪ್ರಯೋಗಗಳನ್ನು ಮಾಡಿಕೊಂಡು ಬೇರೆ ಬೇರೆ ಮಾದರಿಯಲ್ಲಿ ಮಾರುಕಟ್ಟೆ ಗೆ ಬಿಡುಗಡೆಮಾಡುತ್ತಾ ಇದ್ದೇವೆ ಎಂದು ಅವರು ಹೇಳಿದರು. ಪ್ರಾಮಾಣಿಕ , ಪಾರದರ್ಶಕತೆಯ ನಿಟ್ಟಿನಲ್ಲಿ ಹೈನುಗಾರರು ಒಕ್ಕೂಟದ ಜತೆ ಸೇರಿಕೊಂಡು ವ್ಯವಹಾರ ಮಾಡಬೇಕು ಎಂದು ಅವರು ತಿಳಿಸಿದರು. ಮಹಾಸಭೆ ಪೂರ್ವಭಾವಿಯಾಗಿ ತಾಲೂಕುಗಳ ಸಂಘದ ಜೊತೆ ಸಮಾಲೋಚನೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಇದು ವೇದಿಕೆ ಯಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕೇಳಿ ಬಂದ ಕೆಲ ಸಮಸ್ಯೆಯನ್ನು ಪರಿಹರಿಸಲು ಅಧ್ಯಕ್ಷ ರು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ಗಳಿಗೆ ಸೂಚನೆ ನೀಡಿದರು.
ಹ್ಯಾಪ್ ಹಾಗೂ ಕ್ಲೀರ ಸಿರಿ ಎಂಬ ಸಾಪ್ಟವೇರ್ ಮೂಲಕ ಸಮಸ್ಯೆ ಬಗೆಹರಿಸಲು ಒಕ್ಕೂಟ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದೆ. ಹಾಲು ಉತ್ಪಾದಕರ ಸಂಘಗಳು ಇದರ ಉಪಯೋಗ ಪಡೆಯಲು ತಿಳಿಸಿದರು.
ತಾಂತ್ರಿಕ ವಾಗಿ ಸಾಕಷ್ಟು ತೊಂದರೆಗಳು ಹಾಲು ಉತ್ಪಾದಕರ ಸಂಘಗಳಲ್ಲಿ ಸಾಕಷ್ಟಿದೆ, ಉಪಕರಣಗಳ ಗುತ್ತಿಗೆ ವಹಿಸಿದ ಕಂಪೆನಿ ಯ ಸಹಕಾರ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.
ನಿಗದಿತ ಅವಧಿಗೆ ಸರ್ವೀಸ್ ಸೇವೆ ನೀಡದೆ ತೊಂದರೆ ಅನುಭವಿಸುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದೂರುಗಳು ಸಂಘಗಳಿಂದ ಬರದಂತೆ ಕೆಲಸ ಮಾಡಬೇಕು ಎಂದು ಕಂಪನಿಯ ಮಾಲಕರಿಗೆ ಅಧ್ಯಕ್ಷ ರು ಸೂಚನೆ ನೀಡಿದರು.
ಪಶು ಆಹಾರ ದ ಗುಣಮಟ್ಟದ ಲ್ಲಿ ಅನುಮಾನಗಳು ಇವೆ ಹಾಗೂ ಹಾಲು ಉತ್ಪಾದನೆ ಕೂಡಾ ಕಡಿಮೆ ಇವೆ ಎಂಬ ದೂರುಗಳಿವೆ ಅಲ್ಲದೆ ಹೆಚ್ಚಿನ ಹೈನುಗಾರರು ಖಾಸಗಿ ರಾಸು ಆಹಾರವನ್ನು ಉಪಯೋಗ ಮಾಡುತ್ತಿದ್ದಾರೆ ಎಂಬ ದೂರು ಸಭಾಧ್ಯಕ್ಷರಿಗೆ ನೀಡಿದರು.
ಪಶುಗಳಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಒಕ್ಕೂಟದ ವೈದ್ಯಾಧಿಕಾರಿ ಗಳು ಕೈಗೆ ಸಿಗುತ್ತಿಲ್ಲ ಹಾಗಾಗಿ ಮೊಬೈಲ್ ಆಸ್ಪತ್ರೆ ಒಕ್ಕೂಟದಿಂದ ಸ್ಥಾಪನೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಹಾಲು ಉತ್ಪಾದನೆ, ಹಾಲಿನ ಗುಣಮಟ್ಟ, ಹೈನುಗಾರರಿಗೆ ಸವಲತ್ತುಗಳನ್ನು ವಿತರಣೆ ಮಾಡಿದರಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಸಂಘಗಳನ್ನು ಗುರುತಿಸಿ ಅಂತಹ ಸಂಘಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದಲ್ಲಿ ಉನ್ನತ ಶ್ರೇಣಿಯ ಅಂಕ ಗಳಿಸಿದ ಸಂಘದ ಸದಸ್ಯ ರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಒಕ್ಕೂಟದ ಆದ್ಯಕ್ಷರು ಹಾಗೂ ನಿರ್ದೇಶಕ ರುಗಳಿಗೆ ವೇದಿಕೆಯಲ್ಲಿ ಫಲಪುಷ್ಪ ಶಾಲು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕ ರುಗಳಾದ ಸುಚರಿತ ಶೆಟ್ಟಿ, ಸವಿತಾ ಶೆಟ್ಟಿ, ಸುಭದ್ರಾ ರಾವ್, ವ್ಯವಸ್ಥಾಪಕ ನಿರ್ದೇಶಕ ಡಾ! ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ಡಾ! ನಿತ್ಯಾನಂದ ಭಕ್ತ ಹಾಗೂ ಒಕ್ಕೂಟದ ಅಧಿಕಾರಿಗಳು ಹಾಜರಿದ್ದರು.
ನಿರ್ದೇಶಕ ಸುಧಾಕರ ರೈ ಸ್ವಾಗತಿಸಿ , ನಿರ್ದೇಶಕಿ ಸವಿತಾ ಶೆಟ್ಟಿ ವಂದಿಸಿದರು. ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ
(ಕೆ .ಎಂ .ಎಫ್ ) ವಿಸ್ತರಣಾಧಿಕಾರಿ ಎ ಜಗದೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.