ಬಂಟ್ವಾಳ: ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ನೇತೃತ್ವದಲ್ಲಿನ ಕಾರ್ಡಿಯಲಾಜಿ ಎಟ್ ಡೋರ್ ಸ್ಟೆಪ್ (ಕೆಡ್ ) CAD. ಪೌಂಡೇಷನ್ ಟ್ರಸ್ಟ್ ಇದರ ಪ್ರಾಯೋಜಕತ್ವದಲ್ಲಿನ ಟ್ರಸ್ಟ್ ಗೆ ಸ್ಥಳೀಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭುರವರು ವಿನಂತಿ ಮೇರೆಗೆ ಸಂಗಬೆಟ್ಟು ಆರೋಗ್ಯ ಉಪ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ ಇ. ಸಿ. ಜಿ. ಟೆಲಿಕನ್ಸಲೇಷನ್ ಮೆಷಿನ್ ನನ್ನು ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೆಡ್ ಸಂಸ್ಥೆಯ ಪರವಾಗಿ ಗುರುರಾಜ್ ಮತ್ತು ಶಿವಕುಮಾರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಮಾತಾನಾಡಿ ಡಾ. ಪದ್ಮನಾಭ ಕಾಮತ್ ನೇತೃತ್ವದಲ್ಲಿ ಕೆಡ್ ಸಂಸ್ಥೆಯು ಕಳೆದ 3–4 ವರ್ಷಗಳಿಂದ ಹೃದಯ ಸಂಬಂಧ ಹಲವಾರು ಸೇವೆಯನ್ನು ಸಲ್ಲಿಸುವ ಮೂಲಕ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ. ಸಿ. ಜಿ. ಮೆಷಿನ್ ನೀಡುತ್ತಾ ಬಂದಿದ್ದು,ಇತ್ತೀಚಿನ ದಿನಗಳಲ್ಲಿ ಇದನ್ನು ಹಳ್ಳಿಗಾಡಿನ ಪ್ರದೇಶಗಳಿಗೆ ವಿಸ್ತರಿಸಿ ಪ್ರತಿ ಗ್ರಾಮ ಪಂಚಾಯತ್, ಪ್ರತಿ ಆರೋಗ್ಯ ಉಪ ಕೇಂದ್ರ ವ್ಯಾಪ್ತಿಯ ಜನರಿಗೆ ಹೃದಯದ ಆರೋಗ್ಯ ವಿಚಾರಕ್ಕೆ ಪರೀಕ್ಷೆಗೆ ಬಹಳಷ್ಟು ಉಪಕಾರಿಯಾಗಿದೆ. ಈ ನಿಟ್ಟಿನಲ್ಲಿ ಕೆಡ್ ಸಂಸ್ಥೆಯ ಕಾರ್ಯವೈಖರಿ ದೇಶ ಕ್ಕೆ ಮಾದರಿಯಾಗಿದೆ ಎಂದರು.
ಇ. ಸಿ. ಜಿ.ಮೆಷಿನ್ ಪಡೆದುಕೊಂಡ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಮಾತಾನಾಡಿ ಸಂಗಬೆಟ್ಟು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಇ. ಸಿ. ಜಿ. ಟೆಲಿಕನ್ಸಲೇಷನ್ ಸೆಂಟರ್ ಸ್ಥಾಪಿಸಿದ ಕೆಡ್ ಸಂಸ್ಥೆಗೆ ಕ್ರತಜ್ಯತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿಮಲ ಮೋಹನ್ ಮೂಲ್ಯ ಸದಸ್ಯರಾದ ದಾಮೋದರ ಪೂಜಾರಿ, ಸುರೇಶ ಕುಲಾಲ್, ಸುನೀಲ್ ಶೆಟ್ಟಿಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯ್ಕ್, ಕಾರ್ಯದರ್ಶಿ ರೋಹಿಣಿ, ಆರೋಗ್ಯ ಉಪ ಕೇಂದ್ರದ ಆರೋಗ್ಯ ಸಹಾಯಕಿ ಜ್ಯೋತಿ ಆರ್ ಉಪಸ್ಥಿತರಿದ್ದರು..

