ಬಂಟ್ವಾಳ: ಬುಧವಾರ ಶಾಸಕ ಯು.ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪತಿ,ಪತ್ನಿಯರಿಬ್ಬರು ಹಿಂದೆ- ಮುಂದೆ ಕುಳಿತು ಚರ್ಚೆಯಲ್ಲಿ ಪಾಲ್ಗೊಂಡು ಗಮನಸೆಳೆದರು.ಜಿಪಂಸದಸ್ಯ ರವೀಂದ್ರ ಕಂಬಳಿ ಅವರು ಸಭೆಯ ಮುಂಭಾಗದಲ್ಲಿ ಕುಳಿತು ಚರ್ಚೆಯಲ್ಲಿ ಭಾಗವಹಿಸಿದ್ದರೆ,ಇವರ ಪತ್ನಿ ಗಾಯತ್ರಿ ರವೀಂದ್ರ ಕಂಬಳಿ ಅವರು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿಣಿ.ಇವರು ಪತಿಯ ಹಿಂಬದಿಯ ಸಾಲಿನಲ್ಲಿ ಕುಳಿತು ತಮ್ಮ ಇಲಾಖಾವಾರು ಪ್ರಗತಿ,ಅಂಗನವಾಡಿ ಕೇಂದ್ರದ ಸಮಸ್ಯೆಯನ್ನು ಸಭೆಯಲ್ಲಿ ಬಿಚ್ಚಿಟ್ಟರು.ಪತಿ ರವೀಂದ್ರ ಕಂಬಳಿ ಸಭೆಯಲ್ಲಿ ಎಂದು ನಿಂತು ಜನರ ಸಮಸ್ಯೆಯನ್ನು ಮುಂದಿಟ್ಟಾಗ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಗಾಯತ್ರಿ ಕಂಬಳಿಯವರು ತನ್ನ ಇಲಾಖೆಗೆ ಸಂಬಂಧಿಸಿ ಏನಾದರೂ ಪ್ರಶ್ನೆ ಹಾಕುತ್ತಾರಾ ಎಂದು ಕಣ್ಣು ,ಕಿವಿ ಅರಳಿಸಿ ಆಲಿಸುತ್ತಿದ್ದರೆ,ಪತ್ನಿ ತಮ್ಮ ಇಲಾಖೆಗೆ ಸಂಬಂಧಿಸಿ ಮಾಹಿತಿ ನೀಡಿದಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಪತಿ ತದೇಕಚ್ಚಿತ್ತದಿಂದ ಆಲಿಸುತ್ತಿದ್ದ ದೃಶ್ಯ ಕಂಡು ಬಂತು
